ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Rashmi Kasaragodu
Updated On : 11 Feb 2014, 2:35 am

ಸುಳ್ಯ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಎರಡು ವಾರಗಳ ಹಿಂದೆ ಅರಂತೋಡು ಗ್ರಾಮದ ಕಳುಬೈಲು - ದೇರಾಜೆಯಲ್ಲಿ ತಮ್ಮನಿಗೆ ಅಣ್ಣ ಕತ್ತಿಯಿಂದ ಕಡಿದು ತಲೆಮರೆಸಿಕೊಂಡಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜ. 18ರಂದು ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅಣ್ಣ ಗಂಗಾಧರ ಹಾಗೂ ತಮ್ಮ ಭರತ್ ನಡುವೆ ಚಕಮಕಿ ನಡೆದು, ಗಂಗಾಧರ ಅವರು ಕತ್ತಿಯಿಂದ ತಮ್ಮನಿಗೆ ಕಡಿದು ಗಾಯಗೊಳಿಸಿದ್ದರು. ಗಾಯಗೊಂಡ ಭರತ್‌ನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಮಂಗಳೂರಿಗೆ ಕರೆದೊಯ್ಯಲಾಯಿತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಗಂಗಾಧರರು ತಲೆಮರೆಸಿ ಕೊಂಡಿದ್ದರು. ಭಾನುವಾರ ಅರಂತೋಡಿನಲ್ಲಿ ಗಂಗಾಧರನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎನ್ನಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement