ನಾಳೆ ಸಿಡಿ ಬಿಡುಗಡೆ
ಮಂಗಳೂರು: ಲಲಿತಾ ಪ್ರೊಡಕ್ಷನ್ ವತಿಯಿಂದ ಬುಧವಾರ ನಗರದ ಲೇಡಿಸ್ ಕ್ಲಬ್ನಲ್ಲಿ ಪುತ್ತೂರಿನ ಪವಿತ್ರ ರೂಪೇಶ್ ಹಾಡಿರುವ 'ಭಾವಪರವಶ ಭಕ್ತಿಸುಧೆ' ಕರ್ನಾಟಕ ಶಾಸ್ತ್ರೀಯ ಸಂಗೀತ ಸಿಡಿ ಬಿಡುಗಡೆಗೊಳ್ಳಲಿದೆ. ಒಟ್ಟು 10 ಹಾಡುಗಳಿದ್ದು, ಏಕವ್ಯಕ್ತಿ ಸಂಗೀತ ಆಲ್ಬಂ ಇದಾಗಿದೆ. ಸಂಜೆ 6 ಗಂಟೆಗೆ ಸಿಡಿ ಬಿಡುಗಡೆಗೊಳ್ಳಲಿದ್ದು, ರಾತ್ರಿ 8ರವರೆಗೆ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಗಾಯಕಿ ಪವಿತ್ರಾ ರೂಪೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.