ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಂಪ್‌ವೆಲ್ ಬಳಿ ಬಸ್ ನಿಲ್ದಾಣ: ಯೋಜನೆ ವಿನ್ಯಾಸಕ್ಕೆ ರೈ ಸೂಚನೆ

Rashmi Kasaragodu
Updated On : 11 Feb 2014, 2:33 am

ಮಂಗಳೂರು: ಪಂಪ್‌ವೆಲ್ ಬಳಿ ಬಸ್ ನಿಲ್ದಾಣ ನಿರ್ಮಾಣಕ್ಕೆ ತಜ್ಞ ವಾಸ್ತು ಶಿಲ್ಪಿ ಮೂಲಕ ಯೋಜನೆ ವಿನ್ಯಾಸ ಸಿದ್ಧಪಡಿಸುಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಖಾಸಗಿ ಬಸ್ ತಂಗುದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ ಉದ್ದೇಶಕ್ಕೆ ನಡೆದ ಭೂಸ್ವಾಧೀನ ಚರ್ಚೆ ಸಂದರ್ಭ ಪ್ರತಿಕ್ರಿಯಿಸಿದರು.
ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಜಾಗದ ಕುರಿತು ಯಾವುದೇ ಚರ್ಚೆ ಬೇಡ. ಚರ್ಚೆ ಮಾಡುತ್ತಿದ್ದರೆ ಯೋಜನೆ ವಿಳಂಬವಾಗುತ್ತದೆ. ಮುಂದಿನ ಸಭೆಯೊಳಗೆ ಯೋಜನೆ ವಿನ್ಯಾಸ ಅನುಮೋದನೆಗೆ ಸಿದ್ಧವಾಗಿರಬೇಕು ಎಂದು ಪಾಲಿಕೆ ಆಡಳಿತಾಧಿಕಾರಿ ಮತ್ತು ಆಯುಕ್ತರಿಗೆ ನಿರ್ದೇಶಿಸಿದರು.
'ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದಿರುವ ಕಾರಣ ನಿರ್ದಿಷ್ಟ ಉದ್ದೇಶಕ್ಕೆ ಕಾಯ್ದಿರಿಸಿದ ಭೂಮಿ ನಿಗದಿತ ಅವಧಿಯಲ್ಲಿ ಬಳಸಿಕೊಳ್ಳದಿದ್ದರೆ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಯೋಜನೆ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು ಅತಿ ಮುಖ್ಯ' ಎಂದು ಜಿಲ್ಲಾಧಿಕಾರಿ  ಎ.ಬಿ.ಇಬ್ರಾಹಿಂ ಹೇಳಿದರು.
7.23 ಎಕರೆ ಜಾಗ ಮೊದಲ ಹಂತದಲ್ಲಿ ಸ್ವಾಧೀನ ಮಾಡಲಾಗಿದೆ. ಇದನ್ನು ಮಹಾಯೋಜನೆ ನಕ್ಷೆಯಲ್ಲಿ ಸಾರಿಗೆ ಮತ್ತು ಸಂಪರ್ಕ ವಲಯ ಎಂದು ಗುರುತಿಸಲಾಗಿದೆ. ಎರಡನೇ ಹಂತದಲ್ಲಿ 11.59 ಎಕರೆ ಜಾಗ ಸ್ವಾಧೀನಕ್ಕೆ ಪೂರ್ವಭಾವಿ ಮಂಜೂರಾತಿ ಪಡೆಯಲಾಗಿದೆ. ಇದಕ್ಕೆ 19 ಕೋಟಿ ಠೇವಣಿ ಇಡುವಂತೆ ಭೂಸ್ವಾಧೀನ ಅಧಿಕಾರಿ ಸೂಚಿಸಿದ್ದಾರೆ ಎಂದರು. ಯೋಜನೆ ಕುರಿತು ನಿರ್ಣಯ ಕೈಗೊಳ್ಳದೆ ಕಾದಿರಿಸಿದ ಭೂಮಿಯ ಅಕ್ಕಪಕ್ಕದ ನಿವಾಸಿಗಳು ಹಾಗೂ ಭೂಮಾಲೀಕರಿಗೆ ಅಗತ್ಯ ಸೌಲಭ್ಯ ಪಡೆಯಲು ಕಷ್ಟವಾಗಿದೆ ಎಂದು ಸದಸ್ಯರು ಸಮಸ್ಯೆ ಗಮನಕ್ಕೆ ತಂದರು.
2 ದಿನ ಡೀಸಿ ಪಾಲಿಕೆಗೆ: ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಅಸ್ತಿತ್ವಕ್ಕೆ ಬರುವವರೆಗೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ವಾರದಲ್ಲಿ ಎರಡು ದಿನ ಪಾಲಿಕೆ ಭೇಟಿ ನೀಡಲೇಬೇಕು. ಇದರ ವೇಳಾಪಟ್ಟಿ ಪ್ರಕಟಿಸಬೇಕು ಎಂದು ರೈ ಸೂಚಿಸಿದರು.    
ಶಾಸಕ ಬಿ.ಎ.ಮೊಯ್ದಿನ್ ಬಾವ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ್ ಇದ್ದರು.



ತೆರಿಗೆ ಬಾಕಿ,ಕೋಟಿ ಕೋಟಿ !


ತೆರಿಗೆ ಸಂಗ್ರಹ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಸತ್ಯಾಸತ್ಯತೆ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹ, ನೀರು ಶುಲ್ಕ ಹಾಗೂ ಕಂದಾಯ ಇಲಾಖೆ ವಿಚಾರಗಳ ಸಮಸ್ಯೆಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡಕೊಳ್ಳುವಂತೆ ಸಚಿವ ರೈ ಸೂಚಿಸಿದರು. ಕಳೆದ ಸಾಲಿನ ಆಸ್ತಿ ತೆರಿಗೆ 1,901.36 ಲಕ್ಷ, ಜಾಹೀರಾತು ತೆರಿಗೆ 62.9 ಲಕ್ಷ, ವಾಣಿಜ್ಯ ಸಂಕೀರ್ಣ ಮತ್ತು ಇತರ ಕಟ್ಟಡಗಳ ಬಾಡಿಗೆ ಬಾಕಿ 50.64 ಲಕ್ಷ ಸೇರಿದಂತೆ ಒಟ್ಟು 2,156 ಲಕ್ಷ ಹಾಗೂ ನೀರಿನ ಶುಲ್ಕ 9.65 ಕೋಟಿ ಬಾಕಿ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement