'ಪೊಲೀಸರ ತನಿಖೆ ನಡೆಸಿ'
ಮಂಗಳೂರು: ಉಳ್ಳಾಲದದಲ್ಲಿ ನಡೆದಿರುವ ಗಲಭೆ ಹಿಂದೆ ಸ್ಥಳೀಯ ಠಾಣೆಯ ಪೊಲೀಸರ ಕೈವಾಡ ಅಲ್ಲಗಳೆಯುವಂತಿಲ್ಲ. ತನಿಖೆಯು ಈ ದಿಸೆಯಲ್ಲಿ ನಡೆಯಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದೆ. ಉಳ್ಳಾಲದಲ್ಲಿ ಗಲಭೆ ಸಹಜಸ್ಥಿತಿಗೆ ತರಲು ಪೊಲೀಸರ ಪಾತ್ರ ಪ್ರಮಿಖ. ಪರಿಸ್ಥಿತಿ ನಿಯಂತ್ರಣ ನೆಪಬದಲ್ಲಿ ಪೊಲೀಸರು ಕೈಗೆ ಸಿಕ್ಕವರನ್ನೆಲ್ಲ ಬಂಧಿಸಿದ್ದಾರೆ. ಬಂಧಿತರಲ್ಲಿ ಅಮಾಯಕರೇ ಹೆಚ್ಚಿದ್ದಾರೆ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಿ ಎಂದು ನಿಯೋಗ ವಿನಂತಿಸಿದೆ. ನಿಯೋಗದಲ್ಲಿ ಅಲಿ ಹಸನ್, ಅಬ್ದುಲ್ ಅಝೀಝ್, ಯಾಸೀನ್ ಕುದ್ರೋಳಿ, ಅಯೂಬ್ ಕುದ್ರೋಳಿ, ಆಸೀಫ್ ರಿಕೊ, ಇಸ್ಮಾಯಿಲ್ ಇದ್ದರು.