ಮಾ. 2 ರಂದು ಮಿಸ್, ಮಿಸ್ಟರ್ ಮಂಗಳೂರು ಸ್ಪರ್ಧೆ
ಮಂಗಳೂರು: ಮೂಡುಬಿದಿರೆ ಪಂಡಿತ್ ಹೆಲ್ತ್ ಸೆಂಟರ್ನಲ್ಲಿ ಮಾ. 2 ರಂದು 'ಮಿಸ್ ಮತ್ತು ಮಿಸ್ಟರ್ ಮಂಗಳೂರು-2014' 3ನೇ ಆವೃತ್ತಿ ಕಾರ್ಯಕ್ರಮ ನಡೆಯಲಿದೆ.
ಮಂಗಳೂರಿನ ಪುರುಷ ಮತ್ತು ಮಹಿಳೆಯರ ಭಾವಾಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಲು ಸ್ಪರ್ಧೆ ವೇದಿಕೆ ಒದಗಿಸಲಿದೆ. ನಗರದ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಕಾರ್ಯಕ್ರಮ ಇದಾಗಿದ್ದು, ವಿಜೇತರಿಗೆ ಯುರೋ ಗೋಲ್ಡ್ ವತಿಯಿಂದ ಡೈಮಂಡ್ ಜ್ಯುವೆಲ್ಲರ್ ಬಹುಮಾನ ಸಿಗಲಿದೆ ಎಂದು ಫ್ಯಾಶನ್ ಎಬಿಸಿಡಿಯ ಅನುಪಮಾ ಸುವರ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿ ವಿಭಾಗದಲ್ಲಿ 16 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗಾಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ರಿಲಾಯನ್ಸ್-ಲಾಕ್ಮೆ ಫ್ಯಾಶನ್ ವೀಕ್ನ ನಿಖಿತಾ ಪೂಂಜಾ, ಮಿಸ್ ಸೌತ್ ಇಂಡಿಯಾ ಸ್ಪರ್ಧೆಯ ಅಜಿತ್ ರವಿ ಪೆಗಾಸಸ್ ಮತ್ತು ಮುಂಬೈ ಆನಂದ್ ಬ್ರೈಡಲ್ಸ್ನ ಆನಂದ್ ಜೀ ಇವರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ ಎಂದರು.
ಮಿಸ್ ಮಂಗಳೂರು ಸ್ಪರ್ಧೆಯನ್ನು ಫ್ಯಾಶನ್ ಎಬಿಸಿಡಿಯು ಡ್ರೀಮ್ ಕ್ರಾಫ್ಟ್ ಕ್ರಿಯೇಶನ್ಸ್ನ ಸಹಯೋಗದಲ್ಲಿ ನಡೆಯಲಿದೆ. ಇದರಲ್ಲಿ ಆಯ್ಕೆಯಾದ ಸ್ಪರ್ಧಿಗಳು 2015ರಲ್ಲಿ ನಡೆಯುವ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶ ಪಡೆಯುತ್ತಾರೆ ಎಂದು ಫ್ಯಾಶನ್ ಎಬಿಸಿಡಿಯ ಚರಣ್ ಸುವರ್ಣ ಹೇಳಿದರು.
ಯೋಗ, ಧ್ಯಾನ, ವ್ಯಕ್ತಿತ್ವ ವಿಕಸನ, ಪ್ರಶ್ನೋತ್ತರ ಅವಧಿ, ಕ್ಯಾಟ್ವಾಕ್, ಸೌಂದರ್ಯ ಸಲಹೆ, ಭಾವಚಿತ್ರ ತೆಗೆಯುವಿಕೆ, ಸಂವಹನ, ಪ್ರತಿಭಾ ಹುಡುಕಾಟ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ. ಸುಹೈಲ್, ಅದಿತಿ ಶೆಟ್ಟಿ ಮುಂಬೈ ಕೊರಿಗ್ರಫಿ ಮಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಾಹಿರಾತು ಮುಖ್ಯಸ್ಥ ಸುದರ್ಶನ್ ಸಾಲಿಯಾನ್, ಪಂಡಿತ್ ಹೆಲ್ತ್ ರೆಸಾರ್ಟ್ ಲಾಲ್ ಗೊಯಾಲ್, ಡಾ. ನಿತಿನ್ ಇದ್ದರು.