ನರ್ಸಿಂಗ್ ವಿದ್ಯಾರ್ಥಿ ಮೃತದೇಹ ಗುಜರಾತ್ಗೆ
ಮೂಲ್ಕಿ: ಇಲ್ಲಿನ ಕೊಳಚಿಕಂಬಳದ ಸಮೀಪ ಸಮುದ್ರದ ಅಳಿವೆ ಬಾಗಿಲಿನಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ ನೀರುಪಾಲಾಗಿ ಮೃತಪಟ್ಟ ವಿದ್ಯಾರ್ಥಿ ಜಿಗ್ನೇಶ್ನ ಮೃತದೇಹವನ್ನು ಗುಜಾರಾತಿಗೆ ಕೊಂಡೊಯ್ಯಲಾಯಿತು. ಭಾನುವಾರ ಅಳಿವೆ ಬಾಗಿಲಿಗೆ ಈಜಲು ಹೋದ ಮೂಲ್ಕಿ ಸೇಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜಿನ ಪ್ರಥಮ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ, ಗುಜರಾತ್ ಮೂಲದ ಜಿಗ್ನೇಶ್ ಕುಲವಂಶ್ ಬಾಯಿ ಮನೆಯವರು ಮಂಗಳವಾರ ಮೂಲ್ಕಿಗೆ ಆಗಮಿಸಿ, ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಶವ ಪಡೆದು ಹಿಂತಿರುಗಿದರು. ಜಿಗ್ನೇಶ್ನ ಶವ ಮೂಲ್ಕಿಗೆ ಆಗಮಿಸಿದ ಸಂದರ್ಭ ಮೂಲ್ಕಿಯ ಸೇಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯ, ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು.
ಕಟ್ಟಡದಿಂದ ಬಿದ್ದು ಗಾಯ
ಮೂಲ್ಕಿ: ಹಳೆಯಂಗಡಿಯ ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಬಹು ಮಹಡಿಯ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಮಹಡಿಯ ಮೇಲಿನಿಂದ ಕೆಲಸ ಮಾಡುತ್ತಿದ್ದ ಬಿಜಾಪುರ ಮೂಲದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.