ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯುವತಿಗೆ ಚುಡಾಯಿಸುತ್ತಿದ್ದ ಬಸ್ ನಿರ್ವಾಹಕಗೆ ಗೂಸ

Rashmi Kasaragodu
Updated On : 12 Feb 2014, 2:58 am

ಮೂಲ್ಕಿ: ಕಿನ್ನಿಗೋಳಿ- ಮಂಗಳೂರು ಖಾಸಗಿ ಬಸ್ಸೊಂದರ ನಿರ್ವಾಹಕ ಹಳೆಯಂಗಡಿ ಸಮೀಪದ ಬೊಳ್ಳೂರಿನ ನಿವಾಸಿ ಹಾಗೂ ಈತನ ಇಬ್ಬರು ಸ್ನೇಹಿತರು ಯುವತಿಯೊಬ್ಬಳಿಗೆ ಕಳೆದ ಹಲವಾರು ದಿನಗಳಿಂದ ಕೀಟಲೆ ನೀಡುತ್ತ ಮೊಬೈಲ್‌ನಲ್ಲಿ ಫೋಟೋ ಚಿತ್ರೀಕರಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನಿರ್ವಾಹಕನಿಗೆ ಗೂಸ ನೀಡಿದ ಘಟನೆ ಮಂಗಳವಾರ ನಡೆದಿದೆ. ಈ ಮೂವರಿಂದ ಹಿಂಸೆ ಅನುಭವಿಸುತ್ತಿದ್ದ ಯುವತಿ ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಳು. ಮನೆಯವರು ಹಾಗೂ ಸ್ಥಳೀಯರು ಮಂಗಳವಾರ ಮಧ್ಯಾಹ್ನ ಬಸ್ ಬರುವುದನ್ನೇ ಕಾಯ್ದು ಕುಳಿತಿದ್ದು, ಬಸ್ ಬಂದ ಬಳಿಕ ಬಸ್‌ನಿಂದ ಇಳಿದ ನಿರ್ವಾಹಕನಿಗೆ ಚೆನ್ನಾಗಿ ಗೂಸ ನೀಡಿ ಬಸ್ ನಿಲ್ದಾಣ ಸಮೀಪದ ಖಾಲಿ ಅಂಗಡಿಗೆ ಕರೆದೊಯ್ದು ಮತ್ತಿಬ್ಬರು ಸ್ನೇಹಿತರ ಬಗ್ಗೆ ಮಾಹಿತಿ ನೀಡುವಂತೆ ದಬಾಯಿಸಿದ್ದಾರೆ. ವಿಷಯ ತಿಳಿದು ಮೂಲ್ಕಿ ಪೊಲೀಸರು ಸ್ಥಳಕ್ಕೆ ಬರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಿರ್ವಾಹಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement