ಇಂದು ಮೊದಲ ಮಖೆ ಜಾತ್ರೆ
ಉಪ್ಪಿನಂಗಡಿ: ನೇತ್ರಾವತಿ- ಕುಮಾರಧಾರ ಉಭಯ ನದಿಗಳ ಸಂಗಮ ಸ್ಥಳದಲ್ಲಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮೊದಲ ಮುಖೆ ಜಾತ್ರೆ ಫೆ.13ರಂದು ನಡೆಯಲಿದೆ. ಈ ಬಾರಿ ಧಾರ್ಮಿಕ ಸಭೆಯನ್ನು ಮೂರು ಮಖೆ ಜಾತ್ರೆಯಲ್ಲಿ ಆಯೋಜಿಸಲಾಗಿದ್ದು, ಮೊದಲ ಮಖೆ ಜಾತ್ರೆಯ ಧಾರ್ಮಿಕ ಸಭೆಯಲ್ಲಿ ಒಡಿಯೂರು ಮಠಾಧೀಶ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಾಮಾಜಿಕ ಮುಂದಾಳು ಕಜೆ ಈಶ್ವರ ಭಟ್ ವಹಿಸಲಿದ್ದು, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಎಂ. ನಾಗರಾಜ್ ಭಾಗವಹಿಸಲಿದ್ದಾರೆ. ಮಖೆ ಜಾತ್ರೆಯ ಮರು ದಿನ ನಸುಕಿನ ವೇಳೆ ಉಭಯ ನದಿಗಳ ಸಂಗಮ ಸ್ಥಳದಲ್ಲಿ ಭಕ್ತರಿಂದ ನಡೆಯುವ ಮಖೆ ತೀರ್ಥ ಸ್ನಾನ ಮೊದಲ ಮಖೆ ಜಾತ್ರೆಯ ಮರು ದಿನವಾದ ಶುಕ್ರವಾರ ನಡೆಯಲಿದೆ.