ನಾಟಕ ಕಲಾವಿದರ ಒಕ್ಕೂಟಕ್ಕೆ ಇಂದು ದಶಕದ ಸಂಭ್ರಮ
ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ. 13 ರಂದು ಪುರಭವನದಲ್ಲಿ ತುಳು ನಾಟಕ ಕಲಾವಿದರ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಎಕ್ಕಸಕ ಚಲನಚಿತ್ರ ನಿರ್ಮಾಪಕ ಚಂದ್ರಹಾಸ ಶೆಟ್ಟಿ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ ಪಾಲ್ಗೊಳ್ಳುವರು ಎಂದು ಒಕ್ಕೂಟದ ಗೌರವಾಧ್ಯಕ್ಷ ಅಚ್ಯುತ ಕಲ್ಲಾಪು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಿರಿಯ ತುಳುನಾಟಕಕಾರ ಸೀತಾರಾಮ ಕುಲಾಲ್ ಅವರಿಗೆ ತೌಳವ ಪ್ರಶಸ್ತಿ ಹಾಗೂ ರಂಗ ನಟ ರಾಜೇಶ್ ಬಂಟ್ವಾಳ ಇವರಿಗೆ ಗೌರವ ಧನ ನೀಡಿ ಗೌರವಿಸಲಾಗುತ್ತದೆ ಎಂದರು. ಇದೇ ಸಂದರ್ಭ ರಂಗನಟ ಎಸ್. ರಾಮ್‌ದಾಸ್, ನಿರ್ದೇಶಕರಾದ ವಿ.ಜಿ. ಪಾಲ್, ಅಶೋಕ್ ಕುಮಾರ್ ಬಿಕರ್ನಕಟ್ಟೆ, ಸಂಗೀತ ನಿರ್ದೇಶಕ ಎ.ಕೆ. ವಿಜಯ್, ಹಿನ್ನಲೆ ಗಾಯಕ ಚಂದ್ರಹಾಸ ಸುವರ್ಣ, ಹಿನ್ನಲೆ ಗಾಯಕಿ ನಯನ ರಾಜ್‌ಗೋಪಾಲ್ ಇವರನ್ನು ಸನ್ಮಾನಿಸಲಾಗುವುದು ಎಂದರು.