ಪ್ರೇಮಿಗಳ ದಿನ ನಿಷೇಧಕ್ಕೆ ಆಗ್ರಹ
ಮಂಗಳೂರು: ಫೆ.14ರಂದು ವ್ಯಾಲೆಂಟೈನ್ ಡೇ ನಿಷೇಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಪ್ರೇಮಿಗಳ ದಿನಾಚರಣೆ ಶಾಲಾ ಕಾಲೇಜುಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಆರಂಭವಾಗಿದೆ. ವಿದೇಶಿ ಕಂಪನಿಗಳು ಸ್ವಂತ ಲಾಭಕ್ಕೆ ಆಕರ್ಷಕ ಗಿಫ್ಟ್ ವಸ್ತುಗಳ ಮಾರಾಟದಿಂದ ಯುವಕ ಯುವತಿಯರಲ್ಲಿ ಅನೈತಿಕ ದಿನಾಚರಣೆಗೆ ಒತ್ತು ನೀಡುತ್ತಿವೆ. ಈ ದಿನಾಚರಣೆಯ ದುಷ್ಪರಿಣಾಮ ತಡೆಗಟ್ಟಲು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಿ, ಇಂಥ ದಿನಾಚರಣೆಗೆ ನಿಷೇಧಿಸಿ, ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ದಿನ ಆಚರಿಸಬೇಕು ಎಂದು ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ ಎಂದು ಜಿಲ್ಲಾ ಸಮನ್ವಯಕಾರ ಪ್ರಸನ್ನ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.