ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ರು. 14.20 ಲಕ್ಷ ಮೌಲ್ಯದ ಚಿನ್ನ ವಶ
ಮಂಗಳೂರು: ಬಹರೈನ್ನಿಂದ ವಿಮಾನದಲ್ಲಿ ಮಂಗಳೂರಿಗೆ ಬಂದ ಪ್ರಯಾಣಿಕನಿಂದ 14.20 ಲಕ್ಷ ರುಪಾಯಿ ಮೌಲ್ಯದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಮಧೂರಿನ ಅಬೂಬಕ್ಕರ್ ಸಿದ್ದಿಕ್ ಬಂಧಿತ. ಈತ ಬಹರೈನ್ನಿಂದ ಬರುವಾಗ 466.600 ಗ್ರಾಂ ಚಿನ್ನದ ಮೂರು ಬಾರ್ ಮತ್ತು ಮೂರು ಚಿನ್ನದ ಪಟ್ಟಿಯನ್ನು ಎಲ್ಇಡಿ ಲೈಂಟ್, ಲ್ಯಾಂಪ್ ಹಾಗೂ ಮಗ್ನೊಳಗೆ ಬಚ್ಚಿಟ್ಟು ತಂದಿದ್ದ. ಸಂಜೆ ವಿಮಾಮ ಇಳಿದಾಕ್ಷಣ ತಪಾಸಣೆ ವೇಳೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.