ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೆಲ, ಜಲ ಸಂಚಾರ ಮಾಡುವ ಹೋವರ್‌ಕ್ರಾಫ್ಟ್ ಪಣಂಬೂರಿಗೆ

Mainashree
Updated On : 17 Feb 2014, 10:44 am

ಮಂಗಳೂರು: ಕೋಸ್ಟ್ ಗಾರ್ಡ್‌ನ ಹೋವರ್ ಕ್ರಾಫ್ಟ್ ಹಡಗು ಎಚ್-194 ಪಣಂಬೂರ್ ಬೀಚ್‌ಗೆ ಶುಕ್ರವಾರ ಆಗಮಿಸಿದೆ.
ಕೋಸ್ಟ್‌ಗಾರ್ಡ್ ಕಮಾಂಡೆಂಟ್ ರಾಜಮಣಿ ಶರ್ಮ ಹಡಗಿಗೆ ಸ್ವಾಗತ ಕೋರಿದರು. ಭೂಮಿ ಮತ್ತು ಸಾಗರದಲ್ಲಿ ಗಂಟೆಗೆ 45 ಕಿ.ಮೀ. ವೇಗವಾಗಿ ಚಲಿಸಬಲ್ಲ ಹಡಗು ಇದಾಗಿದ್ದು, ಶೋಧ, ರಕ್ಷಣೆ ಕಾರ್ಯಚರಣೆಗೆ ಬಳಸಬಹುದಾಗಿದೆ.
ಈ ಹಡಗು, ಮುಳುಗುತ್ತಿರುವ ಸಣ್ಣ ಬೋಟ್ ಮತ್ತು ಹಡಗುಗಳನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದರು.
 ಇಲ್ಲಿ ಈ ಹಡಗು ನಿಲ್ಲುವ ವ್ಯವಸ್ಥೆ ಆದ ತಕ್ಷಣ ನವಮಂಗಳೂರು ಬಂದರಲ್ಲಿ ಈ ಹೋವರ್ ಕ್ರಾಫ್ಟ್ ತಂಗಲಿದೆ. ಈ ಮೂಲಕ ಕರ್ನಾಟಕ ಕರಾವಳಿ ಭದ್ರತೆ ಹೆಚ್ಚಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement