ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೈಕ್-ಆಟೋ ಡಿಕ್ಕಿ: ಓರ್ವ ಮೃತ, ಇಬ್ಬರು ಗಂಭೀರ

Mainashree
Updated On : 17 Feb 2014, 10:41 am

ವಿಟ್ಲ: ಬೈಕ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್‌ನಲ್ಲಿ ಹೋಗುತ್ತಿದ್ದ ಒಬ್ಬ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಕೇಪು ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಅಡ್ಯನಡ್ಕ ಸಮೀಪದ ಮಣಿಮುಂಡ ನಿವಾಸಿ ಸದಾಶಿವ ನಾಯ್ಕ ಅವರ ಪುತ್ರ ಸುಜೀತ್ ಕುಮಾರ್ (20) ಮೃತರು. ಮಣಿಮುಂಡ ನಿವಾಸಿಗಳಾದ ರಾಮಣ್ಣ ನಾಯ್ಕ ಅವರ ಪುತ್ರ ದಿನೇಶ್ ಕುಮಾರ್(24) ಹಾಗೂ ಅದೇ ಗ್ರಾಮದ ನಿವಾಸಿ ದೇವ ನಾಯ್ಕ ಅವರ ಪುತ್ರ ಹರೀಶ್(24) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಟ್ಲ ಕಡೆಯಿಂದ ಅಡ್ಯನಡ್ಕ ಕಡೆಗೆ ಸುಜಿತ್ ಕುಮಾರ್ ಎಂಬವರು ತನ್ನ ಬೈಕಿನಲ್ಲಿ ತನ್ನ ಸ್ನೇಹಿತರಾದ ದಿನೇಶ್ ಹಾಗೂ ಹರೀಶ್ ಎಂಬಿಬ್ಬರನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಪುಣಚ ಕಡೆಯಿಂದ ಚಂದಳಿಕೆ ನಿವಾಸಿ ನಾರಾಯಣ ಅವರ ಆಟೋ ವಿಟ್ಲ ಕಡೆಗೆ ತೆರಳುತ್ತಿತ್ತು. ಉಕ್ಕುಡ ಎಂಬಲ್ಲಿ ಮೂರು ರಸ್ತೆ ಸಂಪಕರ್‌ಸುವ ರಸ್ತೆಯಲ್ಲಿ ಆಟೋ ವಿಟ್ಲ ಕಡೆಗೆ ತಿರುಗುತ್ತಿದ್ದ ಸಂದರ್ಭ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಮೂವರು ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಅವರ ಪೈಕಿ ಸಜಿತ್ ಕುಮಾರ್ ಅವರ ತಲೆಗೆ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು, ಉಳಿದ ಇಬ್ಬರ ಸವಾರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣವೇ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಸುಜಿತ್ ಕುಮಾರ್ ಮಾರ್ಗಮಧ್ಯೆ ಅಸುನೀಗಿದರು. ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement