ಸಾಹಿತ್ಯದಲ್ಲಿ ಮಾನವೀಯತೆ ಬೇಕು: ಮೊಗಸಾಲೆ
ಮಂಗಳೂರು: ಸಾಹಿತ್ಯ ಹೀಗೆಯೇ ಇರಬೇಕು ಎಂಬ ಬದ್ಧತೆ ಆವಾಹಿಸುವುದು ಸರಿ ಅಲ್ಲ. ಆದರೆ ಅದರಲ್ಲಿ ಮಾನವೀಯತೆ ತುಂಬಿರಬೇಕು ಎಂದು ಸಾಹಿತಿ ಡಾ.ನಾ.ಮೊಗಸಾಲೆ ಹೇಳಿದರು.
ತೋಟಬೆಂಗರೆಯ ಡಾ.ಜಿ.ಎಸ್.ಶಿವರುದ್ರಪ್ಪ ವೇದಿಕಯೆಲ್ಲಿ ಶುಕ್ರವಾರ ಸಂಜೆಯಿಂದ ಮರುದಿನ ಬೆಳಗ್ಗೆ ವರೆಗೆ ನಡೆದ 5ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ವಹಿಸಿ ಮಾತನಾಡಿದರು. ಸಾಹಿತ್ಯ ಸಮ್ಮೇಳನಗಳು ಬೇಕೇ ಬೇಡವೆ ಎಂಬ ಚರ್ಚೆ ನಡೆಯುತ್ತಿರುವ ನಡುವೆ ಆಳ್ವಾಸ್ ನುಡಿಸಿರಿ, ಧಾರಾವಾಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಶಿಷ್ಟ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿವೆ. ಬೆಳದಿಂಗಳಲ್ಲಿ ಇಡೀ ರಾತ್ರಿ ನೆಡೆಯುವ ಶೇಖರ ಅಜೆಕಾರ್ ಪರಿಕಲ್ಪನೆ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಹೊಸತನದ ಹುಡುಕಾಟ ಎಂದು ಪ್ರಶಂಶಿಸಿದರು.
ಸಮ್ಮೇಳನ ಉದ್ಘಾಟಿಸಿದ ಎ.ಎಸ್.ಎನ್.ಹೆಬ್ಬಾರ್, ಸಾಹಿತಿಗಳು ಪ್ರಧಾನಿ ಸೇರಿದಂತೆ ದೇಶದ ಪ್ರಮುಖ ಹುದ್ದೆಗೆ ಬಂದರೆ ದೇಶ ಗುಣಾತ್ಮಕವಾಗಿ ಸುಧಾರಣೆಯಾಗಬಹುದು ಎಂದರು.
ಸಮ್ಮೇಳನಕ್ಕೆ ಮುನ್ನ ಅಧ್ಯಕ್ಷರು ಮತ್ತು ಅತಿಥಿಗಳ ಜತೆಯಲ್ಲಿ ವಿಶೇಷ ಹಡಗಲ್ಲಿ ಸಮುದ್ರ ಯಾನ ನಡೆಯಿತು. ಮಕ್ಕಳ ಪ್ರತಿಭೋತ್ಸವವನ್ನು ಖ್ಯಾತ ಜಾದೂಗಾರ್ ಗಿಲಿ, ಗಿಲಿ ಮ್ಯಾಜಿಕ್‌ನ ಜೂ.ಶಂಕರ್ ಉದ್ಘಾಟಿಸಿದರು.
ಮುದ್ರಾಡಿ ನಮ ತುಳುವೆರ್ ಸಂಘಟನೆ ಸುಕುಮಾರ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷ ಶೇಖರ ಸುವರ್ಣ, ಪತ್ರಕರ್ತ ಮಲಾರ್ ಜಯರಾಮ ರೈ, ಮೀರಾ ಕರ್ಕೆರಾ, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಅಧ್ಯಕ್ಷ ಯತೀಶ್ ಬಿ., ಕಾರ್ಯದರ್ಶಿ ಕಿರಣ್, ಬೋರ್ಗಲ್ ಗುಡ್ಡೆ ಮಂಜುನಾಥ, ಸುನೀಲ್ ಬೈಂದೂರ್ ಇದ್ದರು.
ಬೆಳದಿಂಗಳ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್ ಸ್ವಾಗತಿಸಿದರು. ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯಶ್ ಜೋಗಿ ಉಡುಪಿ, ಹರ್ಷಾ ಕೋಟ್ಯಾನ್ ಮೂಡುಬಿದರೆ, ಮಯೂರಿ ಮತ್ತು ಮನವಿ ಸಹೋದರಿಯರು, ಅನಿರುದ್ಧ್ ವಸಿಷ್ಠ ಶರ್ಮ ಕಾಸರಗೋಡು, ದಿವಿತ್ ಕೋಟ್ಯಾನ್ ಮೂಡುಬಿದರೆ, ದಿವ್ಯಶ್ರಿ ಸುಳ್ಯ, ಅಭಿಲಾಶ್ ಕಿನ್ನಿಗೋಳಿ, ಮಹಾಲಕ್ಷ್ಮಿ ಉಪ್ಪಿನಕುದ್ರು, ಸಂಕೇತ್ ಬೆಂಗ್ರೆ ಅವರಿಗೆ ಬಾಲ, ಯುವ ಗೌರವ ಪ್ರದಾನ ಮಾಡಲಾಯಿತು.