ಮಂಗಳೂರಿನ ಜತೆ ಅಡಕೆ ಸಂಬಂಧ!
ಮಂಗಳೂರು: ಮಂಗಳೂರಿಗೂ ನನಗೂ ಅಡಕೆ ಸಂಬಂಧ ಬಹಳ. ಇಲ್ಲಿ ಅಡಕೆ ದರ ಇಳಿದಾಗ ಒಂದು ನಿಯೋಗ ಗುಜರಾತ್ಗೆ ಬಂದೇ ಬರುತ್ತಿತ್ತು. ಗುಜರಾತ್ನಲ್ಲಿ ಏನಾದರೂ ಮಾಡಿ ಅಡಕೆ ಮಾರಾಟ ಉತ್ತೇಜಿಸಿದರೆ, ನಮ್ಮ ಕೃಷಿಕರು ಬದುಕಬಹುದು ಎಂದು ಮನವಿ ಮಾಡುತ್ತಿದ್ದರು. ಕರಾವಳಿಯವರು ಬೇಡಿಕೆ ಸಲ್ಲಿಸಿದಾಗ ಈಡೇರಿಸದಿದ್ದರೆ ಹೇಗೆ? ನೆರವು ನೀಡುವಷ್ಟು ನೀಡುತ್ತಿದ್ದೇವೆ. ಆದರೆ ಕೇವಲ ನೆರವಿನಿಂದ ಗಾಡಿ ಎಷ್ಟು ದಿನ ಓಡುತ್ತದೆ. ಇದರ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರ ಕೃಷಿ ನೀತಿ ಮಾಡಬೇಕು.