ಸಿಬಿಐ ರಾಂಗ್ ನಂಬರ್!
ಮಂಗಳೂರು: ಕಾಂಗ್ರೆಸ್ ದೇಶವನ್ನು ನಾಶ ಮಾಡಿದೆ. ಇದನ್ನು ಸವಾಲ್ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಉತ್ತರ ನೀಡುವುದು ಬಿಡಿ, ಜೈಲಿಗೆ ಅಟ್ಟುವ ಕೆಲಸ ಮಾಡುತ್ತಿದೆ. ಎಲ್ಲ ನಾಯಕರ ಹಿಂದೆ ಸಿಬಿಐ ಛೂ ಬಿಡುತ್ತಿದೆ. ಪ್ರತಿ ದಿನ ಸಿಬಿಐ ತೋರಿಸಿ ಬೆದರುತ್ತಿದ್ದರು. ಬೇರೆಯವರಂತೆ ಸಿಬಿಐಗೆ ಬೆದರುತ್ತಾರೆ ಎಂದು ಭಾವಿಸಿದ್ದರು. ಆದರೆ ಅವರು ರಾಂಗ್ ನಂಬರ್ ಡಯಲ್ ಮಾಡಿದ್ದಾರೆ 'ಲೇನೆಕೆ ದೇನೆ ಪಡ್ಜಾಯೇಂಗೆ' ಎಂದು ಮೋದಿ ಗುಡುಗಿದರು. ಕರಾವಳಿಯಲ್ಲಿಯೂ ಕೂಡಾ ಬಿಜೆಪಿ ಕಾರ್ಯಕರ್ತರು ದನಿ ಎತ್ತಿದರೆ ಬೇರೆ ಬೇರೆ ಕಾರಣಗಳಿಂದ ಕಠಿಣ ಕಾಯ್ದೆ ದಾಖಲಿಸಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.