ಕೇದಾರ ಯಾತ್ರೆಗೆ ಮಂಗಳೂರಲ್ಲಿ ಸ್ವಾಗತ
ಮಂಗಳೂರು: ಆದಿಗುರು ಶಂಕರಾಚಾರ್ಯರ ಸಮಾಧಿಯನ್ನು ಹಿಮಾಲಯದ ಕೇದಾರದಲ್ಲಿ ಪುನರ್ ಪ್ರತಿಷ್ಠಾಪನೆ ಪ್ರಯತ್ನವಾದ 'ಮಿಶನ್ ಕಾಲಟಿ ಟು ಕೇದಾರ' ಯಾತ್ರೆಗೆ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜ್ ವಿದ್ಯಾರ್ಥಿಗಳು, ಶಿಕ್ಷಕರು ಸ್ವಾಗತ ಕೋರಿದರು.
ಹಿಂದು ಜನಜಾಗೃತಿ ಸಮಿತಿ ಪ್ರತಿನಿಧಿ ರಮಾನಂದ ಗೌಡ ಸ್ವಾಗತಿಸಿದರು. ಕಾಲೇಜ್‌ಪ್ರಾಂಶುಪಾಲೆ ಸುಧಾ ಕಾಮತ್ ಇದ್ದರು.
ಉತ್ತರಾಖಂಡ್‌ನಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಆದಿ ಶಂಕರಾಯಾರ್ಚರ ಸಮಾಧಿ ಮಂದಿರ ಪುನರ್ ನಿರ್ಮಾಣ, ದುರಂತದಲ್ಲಿ ಎಲ್ಲವನ್ನು ಕಳೆದುಕೊಂಡ ಜನರಿಗೆ ಸಾಂತ್ವನ ನೀಡಿ ಆತ್ಮ ವಿಶ್ವಾಸ ಮೂಡಿಸಲು, ಯುವಜನರಿಗೆ ಪ್ರಕೃತಿ ಸಂರಕ್ಷಣೆ ಮಹತ್ವ ಕುರಿತು ತಿಳಿಸುವ ಉದ್ದೇಶದಿಂದ ಫೈತ್ ಫೌಂಡೇಶನ್ ಯಾತ್ರೆ ಕೈಗೊಂಡಿದೆ ಎಂದು ಮುಖ್ಯ ಸಮನ್ವಯಕ ರಾಘವ ಚೌಧರಿ ಹಾಗೂ ಅಧ್ಯಕ್ಷ ಅಶೋಕ್ ಕಿಣಿ ಹೇಳಿದರು.
20 ಸಾವಿರ ಕಿ.ಮೀ. ದೂರ ಸಂಚರಿಸಿ 123 ದಿನಗಳಲ್ಲಿ ದುರಂತದ ವಾರ್ಷಿಕ ದಿನ 2014ರ ಜೂ.15ರಂದು ಕೇದಾರನಾಥಕ್ಕೆ ತುಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಆದಿಶಂಕರಾಚಾರ್ಯರು ಸಂಚರಿಸಿದ ಪುಣ್ಯಭೂಮಿ ಮಣ್ಣನ್ನು ಕಲಶದಲ್ಲಿ ಶೇಖರಿಸುವ ಸಲುವಾಗಿ ಶ್ರೀಶಂಕರರ ತಾಯಿ ಸಮಾಧಿಯಿಂದ ಹಿಡಿ ಮಣ್ಣು ಸಂಗ್ರಹಿಸಲಾಗಿದೆ. ಫೆ.14ರಿಂದ ಕಾಲಟಿಯಿಂದ ಆರಂಭವಾದ ಈ ಯಾತ್ರೆ ಕೇರಳದ ಗುರುವಾಯೂರಿಂದ ಹಿಡಿದು ಕಾಸರಗೋಡು, ಮಂಜೇಶ್ವರ ಅನಂತೇಶ್ವರ ದೇವಸ್ಥಾನ, ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇಗುಲ, ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ, ರಥಬೀದಿ ಶ್ರೀವೆಂಕಟರಮಣ ದೇಗುಲ ಪವಿತ್ರ ಮಣ್ಣು ಸಂಸ್ಕರಿಸಿ ಕೊಲ್ಲೂರು ಮೂಕಾಂಬಿಕೆ ದೇಗುಲವಾಗಿ ಶೃಂಗೇರಿಯ ಶಂಕರಾಚಾರ್ಯ ಶಾರದಾ ಪೀಠವಾಗಿ ಬೆಂಗಳೂರಿಗೆ ಫೆ.22ರಂದ ಸಂಜೆ ತೆರಳಲಿದೆ ಎಂದರು.