ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಭಗವಂತನ ಸೇವೆ ಖರ್ಚಲ್ಲ: ಶೃಂಗೇರಿ ಶ್ರೀ

Lingaraj Badiger
Updated On : 21 Feb 2014, 12:56 pm

ಸುಳ್ಯ: ಭಗವಂತನಿಗೆ ಎಷ್ಟೇ ಸೇವೆ ಮಾಡಿದರೂ ಅದರ ಸತ್ಫಲ ಸಿಗುವುದು ನಮಗೇ ಆಗಿರುವುದರಿಂದ ಇದನ್ನು ವ್ಯರ್ಥ ಖರ್ಚು ಎಂದು ತಿಳಿಯದೆ ಲೋಕ ಹಿತಕ್ಕಾಗಿ ನಾವು ಮಾಡುವ ಕೈಂಕರ್ಯ ಎಂದು ಭಾವಿಸಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನವೀಕರಣ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಕಾಂತಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಸಿದ ಬಳಿಕ ಅವರು ಆಶೀರ್ವಚನ ನೀಡಿದರು.
ಭಗವಂತನಿಗೆ ಮಾಡುವ ಸೇವೆ ಖರ್ಚಲ್ಲ. ಹೋಮ, ಹವನ, ವೈದಿಕ ಕಾರ್ಯಗಳನ್ನು ನಡೆಸುವುದು ಲೋಕ ಕಲ್ಯಾಣಕ್ಕಾಗಿಯೇ ಹೊರತು ಪದಾರ್ಥಗಳನ್ನು ವ್ಯರ್ಥ ಮಾಡುವುದಕ್ಕಲ್ಲ. ಅದು ಹತ್ತು ಪಟ್ಟು, ನೂರು ಪಟ್ಟು ಉತ್ಪನ್ನವಾಗಿ ನಮಗೇ ಸಿಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಸ್ವಾಮೀಜಿಗೆ ಅಭಿನಂದನಾ ಪತ್ರ ಮತ್ತು ಗುರು ಕಾಣಿಕೆ ಸಮರ್ಪಿಸಲಾಯಿತು. ರಾಜೇಶ್ ಬಯಂಬು ಅಭಿನಂದನಾ ಪತ್ರ ವಾಚಿಸಿದರು.
ಹೆಬ್ಬೂರು ಮಠದ ಶ್ರೀ ಮಾಧವಾಶ್ರಮ ಸ್ವಾಮೀಜಿ, ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನವೀನ್ ಕುಮಾರ್ ಮೇನಾಲ, ಅಧ್ಯಕ್ಷ ಎ. ಶಿವರಾವ್ ಬಯಂಬು, ಪ್ರಧಾನ ಕಾರ್ಯದರ್ಶಿ ಭಾಸ್ಕರ ರಾವ್ ಬಯಂಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement