ಮೂರ್ನಾಡು: ಪ್ರತಿಭಾ ಕಾರಂಜಿ, ಚಿಂತನ ಪರೀಕ್ಷೆಯಲ್ಲಿ ಸಾಧನೆ
ಮೂರ್ನಾಡು: ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಹಾಗೂ ಚಿಂತನ ಪರೀಕ್ಷೆಯಲ್ಲಿ ಸಾಧನೆ ಮೆರೆದಿದ್ದಾರೆ.
ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಕಂಠಪಾಠದಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 7ನೇ ತರಗತಿಯ ಎ.ಜಿ. ನಿಶಿತ ಪ್ರಥಮ ಹಾಗೂ 3ನೇ ತರಗತಿಯ ಎನ್.ಟಿ. ಯುಕ್ತಿ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗದ ಚಿಂತನ ಪ್ರಕಾಶನದಡಿ ನಡೆದ ಚಿಂತನ ವಿಜ್ಞಾನ ಪರೀಕ್ಷೆಯಲ್ಲಿ ಪಿ.ಬಿ. ಕೃತಿ ರಾಷ್ಟ್ರಮಟ್ಟದಲ್ಲಿ ಪ್ರಥಮ ರ್ಯಾಂಕ್, ಬಿ.ಕೆ. ಇಷಿಕಾ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್, ಎ.ಎಸ್. ಪೂಜಾ, ಕೆ.ಎಂ. ದಿವ್ಯ, ಪಿ.ಎಸ್. ಜೀವಿತ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
--
ಕಾಫಿ ಮಳೆ ವಿಮೆ ಮಾಹಿತಿ ಕಾರ್ಯಾಗಾರ
ಮಡಿಕೇರಿ: ಕಾಫಿ ಮಂಡಳಿ ವತಿಯಿಂದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಕಾಫಿ ಮಳೆ ವಿಮೆ ಬಗ್ಗೆ ಮಾಹಿತಿ ಕಾರ್ಯಾಗಾರ ಬುಧವಾರ ನಡೆಯಿತು. ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‌ನ ಕೊಡಗಿನ ಪ್ರತಿನಿಧಿ ಬೊಳ್ಳಜ್ಜಿರ ಅಯ್ಯಪ್ಪ ಕಾಫಿ ಮಳೆ ವಿಮೆ ಬಗ್ಗೆ ಮಾಹಿತಿ ನೀಡಿದರು. ಕಾಫಿ ಮಂಡಳಿ ಜಂಟಿ ನಿರ್ದೇಶಕ ನಾಗರಾಜಯ್ಯ ಮಾತನಾಡಿ, ಕಾಫಿ ಮಳೆ ಮಿಮೆಗೆ ಕಾಫಿ ಮಂಡಳಿಯಿಂದ ಸಹಕಾರ ನೀಡುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು. ಕಾಫಿ ಮಂಡಳಿ ಉಪನಿರ್ದೇಶಕ ನಟರಾಜ್ ಡಿ.ಎಸ್., ಹಿರಿಯ ಸಂಪರ್ಕ ಅಧಿಕಾರಿ ಶಂಕರ್ ಮತ್ತು ಕಿರಿಯ ಸಂಪರ್ಕ ಅಧಿಕಾರಿ ಚಂದ್ರಶೇಖರ್, ಮಡಿಕೇರಿ, ವಿರಾಜಪೇಟೆ ವಿಭಾಗದ ಎಲ್ಲ ಎಸ್‌ಎಲ್‌ಒ, ಜಿಎಲ್‌ಒ, ಇಐ ಅಧಿಕಾರಿಗಳು ಇದ್ದರು.