ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂಡರ್‌ವೇರ್‌ನಲ್ಲಿ ಚಿನ್ನ ತಂದು ಅಂದರ್ ಆದರು!

Mainashree
Updated On : 22 Feb 2014, 10:19 am

ಮಂಗಳೂರು: ಬಜಪೆ ವಿಮಾನ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಪ್ರಕರಣದಲ್ಲಿ 43.38 ಲಕ್ಷ ಮೌಲ್ಯದ 1.399 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಾರಿ ಒಳ ಉಡುಪಿನಲ್ಲಿ ಇಬ್ಬರು ಚಿನ್ನ ಕಳ್ಳ ಸಾಗಾಟಕ್ಕೆ ಯತ್ನಿಸಿದರೆ, ಒಬ್ಬಾತ ಎಮರ್ಜೆನ್ಸಿ ಲೈಟ್ ಒಳಗೆ ಚಿನ್ನ ಇರಿಸಿ ಸಿಕ್ಕಿಬಿದ್ದಿದ್ದಾನೆ.
ಮೊದಲ ಪ್ರಕರಣದಲ್ಲಿ 933 ಗ್ರಾಂ ತೂಗುವ 10 ಚಿನ್ನದ ತುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೌಲ್ಯ 28.92 ಲಕ್ಷ ಅಂದಾಜಿಸಲಾಗಿದೆ. ಎಮರ್ಜನ್ಸಿ ಲೈಟ್ ಮತ್ತು ರಿಚಾರ್ಜ್ ಮಾಡಬಹುದಾದ ಎಲ್‌ಇಡಿ ಪ್ಲ್ಯಾಶ್ ಲೈಟ್ ಒಳಗೆ ಚಿನ್ನದ ನಾಣ್ಯ ಅವಿತಿರಿಸಿದ್ದ. ಆರೋಪಿ ಸುರತ್ಕಲ್ ಚೊಕ್ಕಬೆಟ್ಟು ಮೆಹಝಬಿನ್ ರುಮಾನ ಜೆಟ್‌ಏರ್‌ವೇಸ್‌ನಲ್ಲಿ ಶನಿವಾರ ಬೆಳಗ್ಗೆ ದುಬೈಯಿಂದ ಬಂದಿದ್ದ. ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎರಡನೇ ಪ್ರಕರಣದಲ್ಲಿ 233.250 ಗ್ರಾಂ ತೂಗುವ ಚಿನ್ನ 6 ತುಂಡುಗಳನ್ನು ಆರೋಪಿ ಒಳ ಉಡುಪಿನಲ್ಲಿ ಅವಿತಿರಿಸಿದ್ದ. ಆರೋಪಿ ಕಾಸರಗೋಡು ಚಟ್ಟಾಂಚಲ್ ನಿವಾಸಿ ಅಹಮ್ಮದ್ ಕಬೀರ್ ಮೊಯ್ದಿನ್ ಕುಂಞಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈತ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ದುಬೈಯಿಂದ ಮಂಗಳೂರಿಗೆ ಬಂದಿಳಿದಿದ್ದ. ಇನ್ನೊಬ್ಬ ಪ್ರಯಾಣಿಕ ಕಾಸರಗೋಡು ಕೊಂಬನಡುಕ್ಕಮ್ ನಿವಾಸಿ ಹಸೈನಾರ್ ತನ್ನ ಒಳ ಉಡುಪಿನೊಳಗೆ 233.260 ಗ್ರಾಂ ತೂಗುವ 6 ಚಿನ್ನದ ತುಂಡುಗಳನ್ನು ಇರಿಸಿಕೊಂಡು ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮಂಗಳೂರಿಗೆ ಬಂದಿಳಿದಿದ್ದ. ಕಸ್ಟಮ್ಸ್ ಆಯುಕ್ತ ಡಿ.ಪುರುಷೋತ್ತಮ್ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತ ಕೃಷ್ಣಕುಮಾರ್ ಪ್ರಸಾದ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement