ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೇತ್ರಾವತಿ ತಿರುವು ಯೋಜನೆ: ನಿಲುವು ಸ್ಪಷ್ಟಪಡಿಸಿ

Mainashree
Updated On : 22 Feb 2014, 10:15 am

ಮಂಗಳೂರು: ಎತ್ತಿನಹೊಳೆ ಯೋಜನೆ ಶತಾಯಗತಾಯ ಜಾರಿಗೊಳಿಸಲು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ರಾಜ್ಯ ಸರ್ಕಾರ ಮುಂದಾಗುತ್ತಿದೆ. ದ.ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬಗ್ಗೆ ತಮ್ಮ ನಿಲುವು ಪ್ರಕಟಿಸಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಕರಾವಳಿ ಜೀವನದಿ ನೇತ್ರಾವತಿ ಸಂರಕ್ಷಣಾ ಸಮಿತಿ ಬಹಿರಂಗ ಚರ್ಚೆಗೆ ಆಹ್ವಾನಿಸಿದೆ. ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಮಂಗಳೂರಿನಲ್ಲಿ ಶನಿವಾರ ಕಾಲೇಜು ಬಂದ್ ಮತ್ತು ಪ್ರತಿಭಟನೆ ಸಭೆಯಲ್ಲಿ ಸಮಿತಿ ಮುಖಂಡ ಎಂ.ಜಿ. ಹೆಗಡೆ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಜಿಲ್ಲೆಯ 6 ಶಾಸಕರು, ಮೂವರು ಸಚಿವರು, ಉಡುಪಿಯ ಸಚಿವರು, ಸಂಸದರು ಸೇರಿದಂತೆ ಎಲ್ಲರೂ ಬಹಿರಂಗವಾಗಿ ಚರ್ಚೆಗೆ ಬರಬೇಕು. ಚರ್ಚೆಯಲ್ಲಿ ನೇತ್ರಾವತಿ ತಿರುವು ಬಗ್ಗೆ ತಮ್ಮ ನಿಲುವು ಪ್ರಕಟಿಸಬೇಕು. ಪ್ರಸ್ತುತ ಈ ಜನಪ್ರತಿನಿಧಿಗಳು ಪತ್ರಿಕಾ ಹೇಳಿಕೆಗಷ್ಟೇ ಸೀಮಿತವಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ಬಾಯಿ ಬಿಡುವುದಿಲ್ಲ. ಇವರ ಅಸಲಿತನ ಬಯಲಿಗೆ ತರಲಾಗುವುದು ಎಂದರು.
ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿದರೆ ಕರಾವಳಿ ಜಿಲ್ಲೆ ಬಂದ್ ಮಾಡುತ್ತೇವೆ. ಹೆದ್ದಾರಿಯಲ್ಲಿ ಪೆಟ್ರೋಲ್, ಗ್ಯಾಸ್ ಸಾಗಾಟ ತಡೆಯಲಾಗುವುದು. ನೈತಿಕಗಿರಿ ವಿರುದ್ಧ ಹೋರಾಡುವ ಸಂಘಟನೆಗಳು ನೇತ್ರಾವತಿ ವಿಚಾರದಲ್ಲಿ ಯಾಕೆ ಮೌನ ಎಂದು ಪ್ರಶ್ನಿಸಿದರು.ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ ಇತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement