ಅಮೆರಿಕ ಕಾನ್ಸುಲ್ ಜನರಲ್ ಡಿಸಿ ಭೇಟಿ
ಮಂಗಳೂರು: ವಾಣಿಜ್ಯ ರಫ್ತು ವಹಿವಾಟಿನ ಕುರಿತು ಅಮೆರಿಕ ಕಾನ್ಸುಲ್ ಜನರಲ್ ಜೆನ್ನಿಫರ್ ಮಿಂಟರ್ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮತ್ತು ಅಧಿಕಾರಿಗಳು, ಸಂಘ ಸಂಸ್ಥೆ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದರು. ಸಮುದ್ರೋತ್ಪನ್ನ, ವಾಣಿಜ್ಯ ವಸ್ತುಗಳ ರಫ್ತು ಮತ್ತು ಆಮದು ವಿಚಾರದಲ್ಲಿ ಮಾತುಕತೆ ನಡೆಸಿದರು. ಬಂದರು ನಾಡು ಕರಾವಳಿಯಲ್ಲಿ ರಫ್ತಿಗೆ ಹೆಚ್ಚಿನ ಉತ್ತೇಜನವಿರುವುದನ್ನು ಮನಗಂಡ ಅವರು, ಪ್ರವಾಸೋದ್ಯಮ ಬಗ್ಗೆ ಆಸಕ್ತಿ ತಾಳಿದರು.
ನಾಳೆಯಿಂದ ಅಮರನಾಥ ಯಾತ್ರೆಗೆ ನೋಂದಣಿ
ಬೆಂಗಳೂರು: ನಗರದ ಶಿವ ಶಕ್ತಿ ಸೇವಾ ಮಂಡಲ ಸಂಸ್ಥೆ ಯಾತ್ರಾರ್ಥಿಗಳನ್ನು ಅಮರನಾಥ ಯಾತ್ರೆಗೆ ಕರೆದೊಯ್ಯುಲಿದ್ದು, ಯಾತ್ರೆ ಬರುವವರ ನೋಂದಣಿ ಕಾರ್ಯ ಮಾರ್ಚ್ 1ರಿಂದ ನಡೆಯಲಿದೆ. ಭಕ್ತರಿಗೆ ಉಚಿತ ಊಟ, ಉಪಹಾರ, ವಸತಿ ಮತ್ತು ದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಶಿವಶಕ್ತಿ ಸೇವಾ ಮಂಡಲ ದೇಶದಲ್ಲಿ ವಿವಿಧೆಡೆ 47 ಸೇವಾ ಕೇಂದ್ರಗಳನ್ನು ಹೊಂದಿದ್ದು, ಕಳೆದ 28ವರ್ಷಗಳಿಂದಲೂ ಭಕ್ತರನ್ನು ಯಾತ್ರಗೆ ಕರೆದೊಯ್ಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿವಶಕ್ತಿ ಸೇವಾ ಮಂಡಲದ ವೈ.ವಿ.ರಾಜು (ಮೊ-94480-36408) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.