ಸಚಿವರ ವರ್ತನೆ ಆಕ್ಷೇಪಾರ್ಹ: ಯುವಮೋರ್ಚಾ
ಬೆಳ್ತಂಗಡಿ: ಸಚಿವ ಅಭಯಚಂದ್ರ ಜೈನ್ ವರ್ತನೆ ಆಕ್ಷೇಪಾರ್ಹ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನಾಕಾರರ ಮೇಲೆ ಸಚಿವರೊಬ್ಬರು ಹಲ್ಲೆ ಯತ್ನ ಮಾಡುವುದು ವಿಪರ್ಯಾಸದ ಜತೆಗೆ ರಾಜ್ಯದ ಆಡಳಿತ ಸ್ಥಿತಿ ಹಿಂದಿನ ಬಿಹಾರದಂತಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಟೀಕಿಸಿದೆ. ಸಚಿವರೇ ಇಂತಹ ವರ್ತನೆ ತೋರಿದರೆ ಸಾರ್ವಜನಿಕರಿಗೆ ರಕ್ಷಣೆ ಕೊಡುವವರು ಯಾರು ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ ಪ್ರಶ್ನಿಸಿದ್ದಾರೆ.