ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಚಿತ ಶಿಕ್ಷಣ ಹಕ್ಕು ಸೀಟುಗಳಿಗೆ ಅರ್ಜಿ ಆಹ್ವಾನ

Lingaraj Badiger
Updated On : 3 Jan 2014, 12:57 pm

ಮಂಗಳೂರು: ಜಿಲ್ಲೆಯ ಖಾಸಗಿ ಅನುದಾನಿತ ರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನಿಗದಿಪಡಿಸಲಾದ ಶೇ. 25 ಸೀಟುಗಳನ್ನು ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
ಶಾಲಾವಾರು ಮೀಸಲಿಟ್ಟ ಸೀಟುಗಳನ್ನು ಸಂಬಂಧಿಸಿದ ಶಾಲೆ ಮತ್ತು ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜ. 6 ರಂದು ಪ್ರಕಟಿಸಲಾಗುತ್ತದೆ. ವಾರ್ಷಿಕ ಆದಾಯ ರು. 3.50 ಲಕ್ಷ ಹೊಂದಿರುವ ಶಾಲೆಯ ನೆರೆಹೊರೆ ಅನಾನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಪೋಷಕರ ಮಕ್ಕಳು ಅರ್ಜಿ ಸಲ್ಲಿಸಬಹುದು. ಜ. 7ರಿಂದ ಫೆ. 8ರವರೆಗೆ ಕಾಲಾವಕಾಶವಿದೆ. ದ.ಕ. ಜಿಲ್ಲೆಯಲ್ಲಿ ಮೀಸಲಿಟ್ಟ ಸೀಟುಗಳ ವಿವರ: ಮಂಗಳೂರು ಉತ್ತರವಲಯದಲ್ಲಿ 37 ಶಾಲೆಗಳಿದ್ದು, 18 ಪೂರ್ವ ಪ್ರಾಥಮಿಕ, 1ನೇ ತರಗತಿಗೆ 457 ಸೇರಿದಂತೆ ಒಟ್ಟು 475 ಸೀಟುಗಳಿವೆ. ಮಂಗಳೂರು ದಕ್ಷಿಣ ವಲಯದಲ್ಲಿ 31 ಶಾಲೆಗಳಿದ್ದು, 1ನೇ ತರಗತಿಗೆ 374 ಸೇರಿದಂತೆ ಒಟ್ಟು 374 ಸೀಟುಗಳಿವೆ. ಮೂಡುಬಿದಿರೆಯಲ್ಲಿ 14 ಶಾಲೆಗಳಿದ್ದು, 1ನೇ ತರಗತಿಗೆ ಒಟ್ಟು 141 ಸೀಟುಗಳಿವೆ. ಬಂಟ್ವಾಳ ವ್ಯಾಪ್ತಿಯಲ್ಲಿ 34 ಶಾಲೆಗಳಿದ್ದು, 1ನೇ ತರಗತಿಗೆ 365 ಸೀಟುಗಳಿವೆ. ಪುತ್ತೂರು ವ್ಯಾಪ್ತಿಯಲ್ಲಿ 27 ಶಾಲೆಗಳಿದ್ದು, 22 ಪೂರ್ವ ಪ್ರಾಥಮಿಕ, 1ನೇ ತರಗತಿಗೆ 353 ಸೇರಿದಂತೆ ಒಟ್ಟು 375 ಸೀಟುಗಳು ಲಭ್ಯವಿದೆ. ಬೆಳ್ತಂಗಡಿಯಲ್ಲಿ 18 ಶಾಲೆಗಳಿದ್ದು, 1ನೇ ತರಗತಿಗೆ ಒಟ್ಟು 176 ಸೀಟುಗಳಿವೆ. ಸುಳ್ಯ 9 ಶಾಲೆಗಳಲ್ಲಿ, 86 ಪೂರ್ವ ಪ್ರಾಥಮಿಕ, 1ನೇ ತರಗತಿಗೆ 2 ಸೇರಿದಂತೆ ಒಟ್ಟು 88 ಸೀಟುಗಳಿವೆ. ಅರ್ಜಿ ನಮೂನೆಯನ್ನು ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ಪಡೆಯಬಹುದು. ದಾಖಲು ಮಾಡಿಕೊಳ್ಳಲು ಬಯಸುವ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement