ಮೂಲ್ಕಿ: ಸಚಿವರ ವರ್ತನೆ ಖಂಡಿಸಿ ನಾಳೆ ಬಿಜೆಪಿ ಪ್ರತಿಭಟನೆ
ಮೂಲ್ಕಿ: ಡಿ.30ರಂದು ಮೂಲ್ಕಿ ನಾಗರಿಕ ಸಮಿತಿ ನೇತೃತ್ವದಲ್ಲಿ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಸಚಿವರ ವರ್ತನೆ ವಿರೋಧಿಸಿ ಹಾಗೂ ಘಟನೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ ಮೂಲ್ಕಿ ನಾಯಕರು ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಹೊರಿಸಿರುವುದನ್ನು ಖಂಡಿಸಿ ಜ.4ರಂದು ಸಂಜೆ ಮೂಲ್ಕಿ ಬಸ್ಸು ನಿಲ್ದಾಣ ಬಳಿ ಬಿಜೆಪಿ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿಯ ಮೂಲ್ಕಿ ನಗರ ಸಮಿತಿ ಪ್ರಕಟಣೆ ತಿಳಿಸಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಹತ್ತಿಕ್ಕುವ ಕಾರ್ಯ ನಡೆಯುತ್ತಿದ್ದು, ಶ್ರಮಿಕ ವರ್ಗದ ಮೇಲೆ ದೌರ್ಜನ್ಯ ನಡೆಸಿದ ಸಚಿವರ ವಿರುದ್ಧ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾ ಸಭೆಯಲ್ಲಿ ಸಚಿವರ ದೌರ್ಜನ್ಯ, ಕಾಂಗ್ರೆಸ್ ಆಡಳಿತದ ವೈಫಲ್ಯ, ಪೊಲೀಸ್ ಅಧಿಕಾರಿ ಮೇಲೆ ಒತ್ತಡ ಹಾಗೂ ಮಾಧ್ಯಮಗಳ ಮೇಲೆ ಹಾಕಿರುವ ವೃಥಾ ಆರೋಪವನ್ನು ಖಂಡಿಸಲಾಗುವುದು. ಮುಂದಿನ ಮೂಲ್ಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.