6ರಂದು ರಿಕ್ಷಾ ಬಂದ್
ಮಂಗಳೂರು: ಕೇಂದ್ರ ಸರ್ಕಾರ ಎಲ್ಪಿಜಿ ದರ ಏರಿಕೆ ವಿರೋಧಿಸಿ ರಿಕ್ಷಾ ಚಾಲಕರು ಜ.5 ಮಧ್ಯರಾತ್ರಿಯಿಂದ 24 ಗಂಟೆಗಳ ರಿಕ್ಷಾ ಬಂದ್ಗೆ ಕರೆ ನೀಡಿದ್ದಾರೆ. ರಿಕ್ಷಾ ಪ್ರಯಾಣ ಮೀಟರ್ ದರ ಪರಿಷ್ಕರಣೆ ಅನಿವಾರ್ಯ ಎಂದು ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ರಿಕ್ಷಾ ಮೀಟರ್ ಕನಿಷ್ಠ ದರ 30 ಹಾಗೂ ಆನಂತರದ ಪ್ರತಿ ಕಿ.ಮೀ.ಗೆ 20 ರಂತೆ ನಿಗದಿ ಪಡಿಸಬೇಕು ಎಂಬುದು ಬೇಡಿಕೆ, ದರ ಪರಿಷ್ಕರಣೆ ಮಾಡುವಂತೆ ಗುರುವಾರ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಸನ್ ಮತ್ತು ಕಾರ್ಯದರ್ಶಿ ವಿ.ವಿಷ್ಣುಮೂರ್ತಿ ತಿಳಿಸಿದ್ದಾರೆ.
ಪೂಜಾರಿಗೆ ಬಿಜೆಪಿ ಜ್ವರ: ಶ್ರೀಕರ ಪ್ರಭು
ಮಂಗಳೂರು: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿಕೆ ಕೇಳುವಾಗ ಅವರಿಗೆ ಬಿಜೆಪಿ ಜ್ವರ ಬಾಧಿಸಿದಂತೆ ಕಾಣುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು ಲೇವಡಿ ಮಾಡಿದ್ದಾರೆ. ಬಿಜೆಪಿ ಬೆಳವಣಿಗೆ ಸಹಿಸಲು ಸಾಧ್ಯವಾಗದೆ ಪ್ರತಿ ನಿತ್ಯ ಬಿಜೆಪಿ ಸೇರುವವರ ಬಗ್ಗೆ ಪೂಜಾರಿ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಪೂಜಾರಿಗೆ ನರೇಂದ್ರ ಮೋದಿ ಬಗ್ಗೆ ಭಯ ಹುಟ್ಟಿರುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತಿತ್ತು. ಈಗ ಯಡಿಯೂರಪ್ಪ ಬಗ್ಗೆ ಪೂಜಾರಿ ಟೀಕಿಸುತ್ತಿರುವುದರಿಂದ ಬಿಜೆಪಿ ಜ್ವರ ಬಾಧಿಸುತ್ತಿರುವುದು ಸ್ಪಷ್ಟವಾಗಿದೆ. ಬಿಎಸ್ವೈ ಬಿಜೆಪಿಯಿಂದ ಪ್ರತ್ಯೇಕವಾಗಿ ಪಕ್ಷ ಕಟ್ಟಿದರು ವಿನಃ ಬೇರೆ ಪಕ್ಷಕ್ಕೆ ಸೇರಿಲ್ಲ. ಬಿಜೆಪಿ ಪ್ರೇಮದಿಂದ ಮತ್ತೆ ಪಕ್ಷಕ್ಕೆ ಮರಳಿದ್ದಾರೆ ಈ ಬಗ್ಗೆ ಪೂಜಾರಿಗೆ ಏಕೆ ಚಿಂತೆ ಎಂದು ಪ್ರಶ್ನಿಸಿದ್ದಾರೆ.