ಡಾ. ಶಾಂತಲಾರ 'ಅಗಸ್ತ್ಯ' ಕೃತಿಗೆ ಪ್ರೊ.ಎಂ. ಹಿರಿಯಣ್ಣ ಗ್ರಂಥ ಪುರಸ್ಕಾರ
ಮಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನೀಡುವ ಪ್ರೊ.ಎಂ. ಹಿರಿಯಣ್ಣ ಗ್ರಂಥ ಪುರಸ್ಕಾರ ಈ ಬಾರಿ ಡಾ. ಶಾಂತಲಾ ವಿಶ್ವಾಸ್ ಅವರ 'ಅಗಸ್ತ್ಯ' ಕೃತಿಗೆ ಲಭಿಸಿದೆ. ಅನುವಾದ ಸಾಹಿತ್ಯ ವಿಭಾಗದಲ್ಲಿ ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿಯನ್ನು ಕನ್ನಡದಿಂದ ಸಂಸ್ಕೃತಕ್ಕೆ ಅವರು ಅನುವಾದಿಸಿದ್ದರು. ಪುರಸ್ಕಾರವು ಫಲಕ ಮತ್ತು 10 ಸಾವಿರ ನಗದನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜ.6ರಂದು ಬೆಂಗಳೂರಿನ ಕಸಾಪದಲ್ಲಿ ನಡೆಯಲಿದೆ. ಪ್ರೊ. ಹಂಪ ನಾಗರಾಜಯ್ಯ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ವಿ.ವಿ. ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷತೆ ವಹಿಸಲಿದ್ದಾರೆ.