ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದೇವಸ್ಥಾನ ಅಭಿವೃದ್ಧಿಯಿಂದ ಅನುಗ್ರಹ ಪ್ರಾಪ್ತಿ: ಪೇಜಾವರ ಶ್ರೀ

Lingaraj Badiger
Updated On : 4 Jan 2014, 12:05 pm

ಉಪ್ಪಿನಂಗಡಿ: ಭಗವಂತನನ್ನು ಮತ್ತಷ್ಟು ಅಭಿವ್ಯಕ್ತಗೊಳಿಸಲು ಬ್ರಹ್ಮಕಲಶೋತ್ಸವಗಳು ನಡೆಯುತ್ತವೆ. ದೇವಸ್ಥಾನಗಳು ಅಭಿವೃದ್ಧಿಗೊಂಡಲ್ಲಿ ಭಗವಂತನು ಅಭಿವ್ಯಕ್ತಗೊಂಡು ನಮ್ಮನ್ನು ಅನುಗ್ರಹಿಸುತ್ತಾನೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ನೂತನ ಧ್ವಜಸ್ತಂಭ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಗುರುವಾರ ಧರ್ಮ ಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೂ ಧರ್ಮ ಮೂಢನಂಬಿಕೆ ಅಲ್ಲ, ಮೂಲನಂಬಿಕೆಯದ್ದು. ಹಿಂದೂ ಧರ್ಮ ಎಂದಿಗೂ ಆಕ್ರಮಣಕಾರಿ ವರ್ತನೆ ತೋರಿಲ್ಲ ಎಂದರು.
ಧಾರ್ಮಿಕ ಪರಿಷತ್ ಸದಸ್ಯ ವಿದ್ವಾನ್ ಪಂಜ ಭಾಸ್ಕರ ಭಟ ಉಪನ್ಯಾಸ ನೀಡಿದರು. ಹೊರನಾಡು ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಎಸ್. ರಾಮವಿಠಲ ಕಲ್ಲೂರಾಯ ಮುಂಬೈ, ಮಧುಸೂದನ ಕಲ್ಲೂರಾಯ ಮುಂಬೈ, ಆರ್. ಲಕ್ಷ್ಮೀಶ ಭಟ್ ಮುಂಬೈ, ಪ್ರಕಾಶ್ ಆಚಾರ್ ಮುಂಬೈ, ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು, ಪವಿತ್ರಪಾಣಿ ಈರಕಿ ಮಠ ವೆಂಕಟರಮಣ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಸಂಚಾಲಕ ಮಾಧವ ಆಚಾರ್ ಇಜ್ಜಾವು, ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುರಾರಿ ರಾವ್ ರಾಮಕುಂಜ, ನಾರಾಯಣ ಕಲ್ಲೂರಾಯ ರಾಮಕುಂಜ, ಶ್ರೀಕಾಂತ ಕಲ್ಲೂರಾಯ, ಪೆರಾಬೆ ನಾರಾಯಣ ಆಚಾರ್ ಇದ್ದರು.
ಸನ್ಮಾನ: ವೈದಿಕ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ, ಈರಕಿಮಠ ವೆಂಕಟ್ರಮಣ ಉಪಾಧ್ಯಾಯ, ಶ್ರೀಕಾಂತ ಕಲ್ಲೂರಾಯ ಬಾಜಳ್ಳಿ, ಸುಣ್ಣಾಲ ಲಕ್ಷ್ಮೀ ನಾರಾಯಣ ರಾವ್, ಸುಬ್ರಹ್ಮಣ್ಯ ಉಪಾಧ್ಯಾಯ, ತನಿಯಪ್ಪ ಮೊಯ್ಲಿ ಅವರನ್ನು ಪೇಜಾವರ ಸ್ವಾಮೀಜಿ ಸನ್ಮಾನಿಸಿದರು. ಅರಣ್ಯ ಇಲಾಖೆ ಅಧಿಕಾರಿ ಶಿವಶಂಕರ್ ದಂಪತಿಯನ್ನು ಸ್ವಾಮೀಜಿ ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement