ಹಳೆಯಂಗಡಿ: 25ರಂದು ಪ್ರಬಂಧ ಸ್ಪರ್ಧೆ
ಮೂಲ್ಕಿ: ದಕ್ಷಿಣ ಭಾರತ ಕ್ರೈಸ್ತ ಚರ್ಚ್ಗಳ ಮಹಾ ಒಕ್ಕೂಟ ಹಳೆಯಂಗಡಿ ಆಶ್ರಯದಲ್ಲಿ ಜ್ಯೋಯಿಸರ ಹಬ್ಬದ ಪ್ರಯುಕ್ತ 25ರಂದು ಹಳೆಯಂಗಡಿಯ ಶ್ರೀನಿವಾಸ ಮಂಟಪದಲ್ಲಿ 'ಅಂತರ್ ಚರ್ಚ್ಗಳಿಗೆ ಜ್ಯೋಯಿಸರ ಹಬ್ಬ ಹಾಗೂ ಹೊಸ ವರ್ಷದಲ್ಲಿ ಯುವಕರ ಪಾತ್ರ' ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ: ಡೇನಿಯಲ್ ದೇವರಾಜ್ ಅಧ್ಯಕ್ಷರು, ಮಹಾ ಒಕ್ಕೂಟ (9448253082, 9632571585) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ವಿರುದ್ಧ ಕ್ರಮಕ್ಕೆ ಆಗ್ರಹ: ರಸ್ತೆ ದುರಸ್ತಿ ಬಗ್ಗೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭ ರಿಕ್ಷಾ ಚಾಲಕನ ಮೇಲೆ ಹಲ್ಲೆ ಯತ್ನ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಸಚಿವರ ವಿರುದ್ಧ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗುತ್ತದೆಂದು ಡೇನಿಯಲ್ ದೇವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಬೆಂಗಳೂರಲ್ಲಿ
ಮಡಿವಾಳರ ಸಮಾವೇಶ
ಪುತ್ತೂರು: ಮಡಿವಾಳ ಸಮುದಾಯದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭಾನುವಾರ ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಡಿವಾಳರ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 1 ಸಾವಿರ ಮಂದಿ ಭಾಗವಹಿಲಿದ್ದಾರೆ ಎಂದು ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎನ್.ಪಿ. ಸುಭಾಶ್ಚಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ ಎಂದರು. ಮಡಿವಾಳರ ಸಂಘದ ಕಾರ್ಯದರ್ಶಿ ರಘುನಾಥ್ ನೆಲ್ಯಾಡಿ, ಉಪಾಧ್ಯಕ್ಷ ಹೊನ್ನಯ್ಯ ಪೊಳಲಿ ಮತ್ತು ಇಂದುಶೇಖರ್, ಮಾಚಿದೇವ ಸಹಕಾರಿ ಸಂಘದ ಅಧ್ಯಕ್ಷ ಉಮಾನಾಥ್ ಇದ್ದರು.
ಆಂಜಿಯೋಪ್ಲಾಸ್ಟ್ ಚಿಕಿತ್ಸೆ ತಜ್ಞೆ ಡಾ. ಅನ್ನಪೂರ್ಣ ಕಿಣಿಗೆ ಸನ್ಮಾನ
ಪುತ್ತೂರು: ಜೀವನದಲ್ಲಿ ಸ್ಪಷ್ಟ ಗುರಿ, ಆತ್ಮವಿಶ್ವಾಸ ಇದ್ದಾಗ ನಿಗದಿತ ಗುರಿ ತಲಪುವುದು ಸಾಧ್ಯ. ನಮ್ಮ ಗುರಿ ತಲಪಿದ ನಂತರ ನಮಗೆ ನಾವೇ ಸ್ಪರ್ಧಿಗಳಾಗಬೇಕು. ಆಗ ನಮ್ಮ ಸಾಧನೆಯ ಮಟ್ಟ ವೃದ್ಧಿಸುತ್ತಲೇ ಇರುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಳೆಯ ವಿದ್ಯಾರ್ಥಿನಿ, ಪ್ರಸ್ತುತ ನ್ಯೂಯಾರ್ಕ್ನ ಮೌಂಟ್ ಸಯನ್ಸ್ ಆಸ್ಪತ್ರೆಯ ನಿರ್ದೇಶಕಿ ಹಾಗೂ ಹೃದಯ ಸಂಬಂಧಿ ಆಂಜಿಯೋಪ್ಲಾಸ್ಟ್ ಚಿಕಿತ್ಸೆಯಲ್ಲಿ ವಿಶ್ವದಾಖಲೆ ಬರೆದ ಡಾ. ಅನ್ನಪೂರ್ಣ ಕಿಣಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಶುಕ್ರವಾರ ಆಡಳಿತ ಮಂಡಳಿ, ಅಧ್ಯಾಪಕವೃಂದ, ವಿದ್ಯಾರ್ಥಿ ಸಂಘ ಹಾಗೂ ವಿಜ್ಞಾನ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಡಾ. ರವಿಪ್ರಕಾಶ್ ಕಜೆ, ಡಾ. ಕಿಣಿಯನ್ನು ಸನ್ಮಾನಿಸಿದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ. ರಾಮ ಭಟ್ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ. ನಾರಾಯಣ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಇದ್ದರು. ಪ್ರಾಂಶುಪಾಲ ಡಾ.ಎಚ್. ಮಾಧವ ಭಟ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ವಂದಿಸಿದರು. ಉಪನ್ಯಾಸಕಿ ಸರಸ್ವತಿ ಸಿ.ಕೆ., ರೇಯಾಂಕ ನಿರ್ವಹಿಸಿದರು.