ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

8ರಿಂದ ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ

Rashmi Kasaragodu
Updated On : 5 Jan 2014, 2:01 am

ಮಣಿಪಾಲ: ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಸಂಘ ಆಶ್ರಯದಲ್ಲಿ ಮಣಿಪಾಲ ವಿವಿ ಆಯೋಜನೆಯಲ್ಲಿ ಜ.8ರಿಂದ 11ರವರೆಗೆ 'ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ- 2014' ಎಂಬ ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯಲಿದೆ ಎಂದು ವಿವಿ ಸಹಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಚಾರಸಂಕಿರಣದಲ್ಲಿ 7 ವಿದೇಶ ಮತ್ತು ಭಾರತದ ವಿವಿಧ ವಿವಿಗಳಿಂದ ಸುಮಾರು 400 ಮಂದಿ ಕ್ರೀಡಾ ತರಬೇತುದಾರರು ಮತ್ತು ಕ್ರೀಡಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 'ವಿಷನ್ 2020- ಗ್ಲೋಬಲ್ ಎಕ್ಸಲೆನ್ಸ್ ಇನ್ ಫಿಸಿಕಲ್ ಎಜ್ಯುಕೇಶನ್ ಆಂಡ್ ಸ್ಪೋರ್ಟ್ಸ್ ಸಯನ್ಸ್‌' ಎಂಬ ಧ್ಯೇಯದೊಂದಿಗೆ ವಿಚಾರಸಂಕಿರಣ ನಡೆಯಲಿದೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಕುಲಪತಿ ಡಾ.ಕೆ. ರಾಮನಾರಾಯಣನ್, ವಿವಿಯ  ಕ್ರೀಡಾ ಮಂಡಳಿ ಕಾರ್ಯದರ್ಶಿ ವಿನೋದ್ ನಾಯಕ್, ಸಂಘಟನಾ ಕಾರ್ಯದರ್ಶಿ ಡಾ. ಕೆಂಪರಾಜ್ ಇದ್ದರು.

ಕಾಲೇಜು ವಿದ್ಯಾರ್ಥಿಗೆ
ಚೂರಿಯಿಂದ ಇರಿದ ಸಹಪಾಠಿ!


ಗೋಣಿಕೊಪ್ಪಲು: ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸಹಪಾಠಿಗೆ ಕಾಲೇಜು ಆವರಣದಲ್ಲೇ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ. ಅಂತಿಮ ಬಿಕಾಂನ ಜೋಡುಬೀಟಿ ಗ್ರಾಮದ ಮಧುಕುಮಾರ್ ಗಾಯಗೊಂಡ ವಿದ್ಯಾರ್ಥಿ. ಆತನ ಸಹಪಾಠಿ ಶಾನ್ ಚಂಗಪ್ಪ ಆರೋಪಿ. ಈ ಇಬ್ಬರು ವಿದ್ಯಾರ್ಥಿಗಳ ನಡುವೆ ಜ.3ರಂದು ಕ್ಷುಲ್ಲಕ ವಿಚಾರಕ್ಕಾಗಿ ಕಲಹ ಉಂಟಾಗಿತ್ತು ಎನ್ನಲಾಗಿದೆ. ಶನಿವಾರ ಕಾಲೇಜು ಶೌಚಾಲಯಕ್ಕೆ ಬಾ ಎಂದು ಆಹ್ವಾನಿಸಿದ ಶಾನ್ ಚಂಗಪ್ಪ, ಚೂರಿಯಿಂದ ಮಧುಕುಮಾರ್ ಮುಖ ಹಾಗೂ ಹೊಟ್ಟೆ ಭಾಗಕ್ಕೆ ಇರಿದ ಎನ್ನಲಾಗಿದೆ. ಗಾಯಾಳುವನ್ನು ಬೆಳಗ್ಗೆ 11 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಗೋಣಿಕೊಪ್ಪಲು ಪೊಲೀಸ್ ಉಪನಿರೀಕ್ಷಕ ರಾಮಿರೆಡ್ಡಿ ಹಡಿಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿದ್ಯಾರ್ಥಿ ಶಾನ್ ಚಂಗಪ್ಪ ತಲೆಮರೆಸಿಕೊಂಡಿದ್ದು, ಶೋಧಕಾರ್ಯ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement