ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊಡಗು ನೆಟ್ಬಾಲ್ ಸಂಘ ಅಸ್ತಿತ್ವಕ್ಕೆ; ರವೀಂದ್ರ ಅಧ್ಯಕ್ಷ

Rashmi Kasaragodu
Updated On : 5 Jan 2014, 2:01 am

ಸೋಮವಾರಪೇಟೆ:  ಕೊಡಗು ಜಿಲ್ಲಾ ಅಮೆಚೂರ್ ನೆಟ್ಬಾಲ್ ಅಸೋಸಿಯೇಷನ್ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾಗಿ ಉದ್ಯಮಿ ಹರಪಳ್ಳಿ ರವೀಂದ್ರ ಹಾಗೂ ಕಾರ್ಯದರ್ಶಿಯಾಗಿ ಬಳಗುಂದದ ಬಿ.ಎಸ್. ಸುರೇಶ್ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆಯ ಮಹದೇಶ್ವರ ಬಡಾವಣೆಯಲ್ಲಿ ಅಸೋಸಿಯೇಷನ್‌ನ ಕಚೇರಿ ತೆರೆಯಲಾಗಿದ್ದು, ಈಗಾಗಲೇ 20 ಮಂದಿ ಸದಸ್ಯರು ಸೇರ್ಪಡೆಗೊಂಡಿದ್ದಾರೆ.
ಅಸೋಸಿಯೇಷನ್ ಖಜಾಂಚಿಯಾಗಿ ಬಿ.ಎಂ.ಪ್ರಶಾಂತ್, ಸಲಹೆಗಾರರಾಗಿ ಟಿ.ಸಿ. ಚಂಗಪ್ಪ, ನಿರ್ದೇಶಕರಾಗಿ ಮಡಿಕೇರಿಯ ಪಿ.ಎಸ್. ಜನಾರ್ದನ್, ವೀರಾಜಪೇಟೆಯ ಬಸವರಾಜು, ಕುಶಾಲನಗರದ ಟಿ.ಕೆ. ರಾಜಶೇಖರ್, ಅಂಬಿಕಾ ಸುರೇಶ್, ಬಿ.ಸಿ. ಚಂದ್ರಾಜು ಅವರನ್ನು ನೇಮಿಸಲಾಗಿದೆ.  

ಅರಣ್ಯ ಇಲಾಖೆ ನೌಕರರಿಗೂ ಪಡಿತರಕ್ಕೆ ಚಿಂತನೆ: ಸಚಿವ
 
ಪುತ್ತೂರು: ಪೊಲೀಸರಿಗೆ ಕಡಿಮೆ ದರದಲ್ಲಿ ಪಡಿತರ ವ್ಯವಸ್ಥೆ ಇರುವಂತೆ ಅರಣ್ಯ ಇಲಾಖೆಯವರಿಗೂ ಪಡಿತರ ಹಾಗೂ ಆರೋಗ್ಯ ಭಾಗ್ಯ ಯೋಜನೆ ಹಾಕಲಾಗಿದ್ದು, ಮುಂದೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಶನಿವಾರ ಪುತ್ತೂರು ಬೈಪಾಸ್ ರಸ್ತೆಯ ಹೊಟೇಲ್ ಅಶ್ವಿನಿ ಸಭಾಭವನದಲ್ಲಿ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗದ 2014ನೇ ಸಾಲಿನ ದಿನಚರಿ ಬಿಡುಗಡೆ, ಮುಂಬಡ್ತಿ ಮತ್ತು ನಿವೃತ್ತಿ ಹೂಂದಿದವರಿಗೆ ಸನ್ಮಾನ ಮತ್ತು ಉಪವಲಯ ಅರಣ್ಯಾಧಿಕಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆ- 2005ರ ಪ್ರಕಾರ ಸುಮಾರು 75 ವರ್ಷಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಇರುವವರಿಗೆ ಹಕ್ಕುಪತ್ರ ನೀಡಲಾಗುತ್ತಿದ್ದು, ಈ ನಿಯಮವನ್ನು ಸ್ವಲ್ಪ ಸಡಿಲ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ರೈ ಹೇಳಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement