ಕೋ.ಚನ್ನಬಸಪ್ಪ ವಿಷಾದ: ಪ್ರತಿಭಟನೆ ವಾಪಸ್
ಮಡಿಕೇರಿ:ಸುವರ್ಣ ಸುದ್ದಿವಾಹಿನಿಯಲ್ಲಿ ಟಿಪ್ಪು ವಿವಾದ ಕುರಿತ ಚರ್ಚೆಯಲ್ಲಿ ಸಾಹಿತಿ ಕೋ. ಚೆನ್ನಬಸಪ್ಪ ಅವರು ತಮ್ಮ ಕೃತಿಯಲ್ಲಿ ಟಿಪ್ಪು ವೈಭವೀಕರಣದಿಂದ ಕೊಡವ ಸಮಾಜಕ್ಕೆ ಆಗಿರುವ ಅವಮಾನದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿ 'ತಮ್ಮಿಂದ ತಪ್ಪಾಗಿದೆ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಕೋ.ಚೆನ್ನಬಸಪ್ಪ ಅವರ ವಿಷಾದದ ಈ ಹೇಳಿಕೆಯನ್ನು ಟಿಪ್ಪು ವೈಭವೀಕರಣ ವಿರೋಧಿ ಸಮಿತಿ ಸ್ವಾಗತಿಸುತ್ತದೆ ಎಂದು ಸಮಿತಿ ಸಂಚಾಲಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ. ಆದ್ದರಿಂದ ಉದ್ದೇಶಿತ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.