ದಕ್ಷಿಣ ಕೊಡಗಿನಾದ್ಯಂತ ಪ್ರತಿಭಟನೆ
ಗೋಣಿಕೊಪ್ಪಲು: ಕೋ. ಚ ನ್ನಬಸಪ್ಪ ವಿರುದ್ಧ ದಕ್ಷಿಣ ಕೊಡಗಿನಾದ್ಯಂತವೂ ಶನಿವಾರ ಒಂದು ಗಂಟೆ ಕಾಲ ವಾಹನ ಸಂಚಾರಕ್ಕೆ ತಡೆಯೊಡ್ಡಲಾಯಿತು.
ಗೋಣಿಕೊಪ್ಪಲು ನಗರದಲ್ಲಿ ಬೆಳಗ್ಗೆ 10 ರಿಂದ 11 ಗಂಟೆವರೆಗೆ ಗೋಣಿಕೊಪ್ಪಲಿನ ನಾಲ್ಕೂ ದಿಕ್ಕಿನಲ್ಲಿಯೂ ಪ್ರತಿಭಟನಾಕಾರರು ರಸ್ತೆಗೆ ಅಡ್ಡನಿಂತು ಪ್ರತಿಭಟಿಸಿದರು.
ಗೋಣಿಕೊಪ್ಪಲು ಉಮಾ ಮಹೇಶ್ವರಿ ದೇವಾಸ್ಥಾನದ ಮುಂಭಾಗ, ಪಾಲಿಬೆಟ್ಟ, ಪೊನ್ನಂಪೇಟೆ ಹಾಗೂ ಎಪಿಎಂಸಿ ಮುಂಭಾಗ ರಸ್ತೆಗೆ ಅಡ್ಡವಾಗಿ ನಿಂತು ವಾಹನ ಸಂಚಾರಕ್ಕೆ ತಡೆಯೊಡ್ಡಲಾಯಿತು. ಗೋಣಿಕೊಪ್ಪಲು ಇಗ್ಗುತಪ್ಪ ಕೊಡವ ಸಂಘ, ಮಾಯಮುಡಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ನಗರ ಬಿಜೆಪಿ ಸ್ಥಾನೀಯ ಸಮಿತಿ, ಚೇಂಬರ್ ಆಫ್ ಕಾಮರ್ಸ್, ಬಿಜೆಪಿ ಮಾತೃ ಮಂಡಳಿ, ಬಿಜೆಪಿ ಯುವ ಮೋರ್ಚಾ, ವಾಹನ ಚಾಲಕರ ಸಂಘ, ವಿಶ್ವ ಹಿಂದೂ ಪರಿಷತ್ ಸಂಘಟನೆಯ ಪ್ರಮುಖರು, ಆರ್‌ಎಸ್‌ಎಸ್ ಪ್ರಮುಖರು, ಬಿಜೆಪಿಯ ಸಿ.ಕೆ. ಬೋಪಣ್ಣ, ಗ್ರಾ.ಪಂ. ಅಧ್ಯಕ್ಷೆ ಪ್ರವಿಮೊಣ್ಣಪ್ಪ, ನೆಲ್ಲೀರ ಚಲನ್, ಮಂಜು, ಕಾಯೇರ ಕಿರಣ್, ಕುಪ್ಪಂಡ ಗಣೇಶ್, ಗ್ರಾ.ಪಂ. ಉಪಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ವರ್ತಕರ ಸಂಘದ ಅಧ್ಯಕ್ಷ ಸುನಿಲ್, ಲೋಕೇಶ್, ಮಹಿಳಾ ಸಮಾಜ ಅಧ್ಯಕ್ಷೆ ಸುಮಿಸುಬ್ಬಯ್ಯ, ಕುಂಕುಮ್ ಲೇಡಿಸ್ ಅಸೋಸಿಯೇಷನ್ ಅಧ್ಯಕ್ಷೆ ರೇಖಾ ಸೋಮಯ್ಯ, ಗೋಣಿಕೊಪ್ಪಲು ಎಪಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.
ಬಾಳೆಲೆಯಲ್ಲಿ ಬೆಳಗ್ಗೆ 11ರಿಂದ 12 ಗಂಟೆವರೆಗೆ ಅಲ್ಲಿನ ರಾಮವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು. ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್, ಅರಮಣಮಾಡ ಸತೀಶ್ ದೇವಯ್ಯ, ಕೊಡವ ಸಮಾಜ ಅಧ್ಯಕ್ಷ ಮಲಚೀರ ಬೋಸ್, ವಿರಾಜಪೇಟೆ ತಾಲೂಕು ಕಾರ್ಯವಾಹ ಗಾಣಂಗಡ ಸುದೀಪ್, ಸಂಘ ಪರಿವಾರದ ಅಡ್ದೇಂಗಡ ರಾಖಿ, ನಿಟ್ಟೂರು ಬಿಜೆಪಿ ಅಧ್ಯಕ್ಷ ಚೆಕ್ಕೇರ ಅಯ್ಯಪ್ಪ ಸೂರ್ಯ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಮಾಚಂಗಡ ಅಶೋಕ್, ಬಾಳೆಲೆ ಎಪಿಸಿಎಂಎಸ್ ಅಧ್ಯಕ್ಷ ಬೋಸ್ ಮಂದಣ್ಣ, ಅಡ್ಡೇಂಗಡ ಅರುಣ, ಮೇಚಂಡ ಕಿಶ, ಕೊಟ್ಟಂಗಡ ಮಧು, ಕಾಯಮಾಡ ರಾಜ, ಅಳಮೇಂಗಡ ಧಿಲ್ಲು, ಸಣ್ಣುವಂಡ ರಾಜ, ಸಂಜು, ಮೇಚಂಡ ವಾಸು ಇತರರು ಇದ್ದರು.
ವಿರಾಜಪೇಟೆ, ತಿತಿಮತಿ- ಆನೆಚೌಕೂರು ಗೇಟ್, ಹುದಿಕೇರಿ, ಕಾನೂರು, ಕುಟ್ಟ, ಬಿ. ಶೆಟ್ಟಿಗೇರಿ, ಬಿರುನಾಣಿ, ಶ್ರೀಮಂಗಲ ವ್ಯಾಪ್ತಿಯಲ್ಲಿಯೂ ಪ್ರತಿಭಟನೆ ನಡೆಯಿತು.