ಕೊನೆಗೂ ಅತ್ಯಾಚಾರ ಪ್ರಕರಣ ದಾಖಲು
ಮಂಗಳೂರು: ವೈದ್ಯಕೀಯ ವಿದ್ಯಾರ್ಥಿನಿ ಅಪಹರಿಸಿ, ಬ್ಲೂಫಿಲಂ ತಯಾರಿಸಿದ ಪ್ರಕರಣದಲ್ಲಿ ಪೊಲೀಸರು ಕೊನೆಗೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಶನಿವಾರ ರಾತ್ರೋರಾತ್ರಿ ಮಂಗಳೂರು ಜೆಎಂಎಫ್‌ಸಿ ಕೋರ್ಟ್‌ಗೆ ವರದಿ ಸಲ್ಲಿಸಿದ್ದು ಐಪಿಸಿ ಕಲಂ 376 (ಅತ್ಯಾಚಾರ) ಅನ್ವಯ ಹೆಚ್ಚುವರಿ ಸೆಕ್ಷನ್ ದಾಖಲಿಸಿದ್ದಾರೆ. ದೇರಳಕಟ್ಟೆ ಪ್ರಕರಣ ಕೇವಲ ಅಪಹರಣ, ಲೈಂಗಿಕ ಕಿರುಕುಳವಲ್ಲ, ಸಾಮೂಹಿಕ ಅತ್ಯಾಚಾರ ದಾಖಲಿಸಬೇಕು ಎಂದು 'ಕನ್ನಡಪ್ರಭ' ಕಾನೂನು ತಜ್ಞರ ಸಲಹೆ ಪಡೆದು ಡಿ.25ರಂದು ವಿಶೇಷ ವರದಿ ಪ್ರಕಟಿಸಿತ್ತು.