ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕೂಡಿಬಂತು ಕಟ್ಟಡ ಭಾಗ್ಯ

Lingaraj Badiger
Updated On : 7 Jan 2014, 1:05 am

ಉಪ್ಪಿನಂಗಡಿ: ಆಂಗ್ಲರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರುವ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕೊನೆಗೂ ನೂತನ ಕಟ್ಟಡ ನಿರ್ಮಾಣ ಯೋಗ ಕೂಡಿ ಬಂದಿದೆ.
ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿರುವ ಹೆಚ್ಚುವರಿ ಭೂಮಿಯನ್ನು ಸಮೀಪದ ಆರೋಗ್ಯ ಕೇಂದ್ರ ವಶದಿಂದ ಪಡೆದುಕೊಳ್ಳುವ ಕಾರ್ಯ ಇಲಾಖೆ ಮಟ್ಟದಲ್ಲಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳೂ ನೂತನ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದರೂ, ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಅಗತ್ಯ ಭೂಮಿಯ ಕೊರತೆ ಸಮಸ್ಯೆಯಾಗಿ ಕಾಡಿ, ಮಂಜೂರಾದ ಅನುದಾನ ವಿನಿಯೋಗಿಸಲಾಗದೆ ಹಿಂತಿರುಗುವ ಪ್ರಮೇಯ ಈ ಹಿಂದೆ ನಡೆಯುತ್ತಿತ್ತು. ಅಗತ್ಯವಾದ ಹೆಚ್ಚುವರಿ 8 ಸೆಂಟ್ಸ್ ಭೂಮಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆ ವಶದಿಂದ ಪಡೆಯುವ ಪ್ರಯತ್ನ ನಡೆಸಲಾಗಿತ್ತು. ಹಲವಾರು ವಿಘ್ನತೆಗಳ ನಡುವೆ ಜಿಪಂ ಸದಸ್ಯ ಕೇಶವ ಗೌಡ ಬಜತ್ತೂರು ಅವರು ಜಿಲ್ಲಾ ಪಂಚಾಯಿತಿ ಅಧೀನದ ಈ ಭೂಮಿಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಲ್ಲಿ ಮುತುವರ್ಜಿ ವಹಿಸಿದ್ದರು. ಇದರ ಫಲವಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಒಪ್ಪಿಗೆ ಮೇರೆಗೆ ಬೇಕಾಗಿದ್ದ ಹೆಚ್ಚುವರಿ 8 ಸೆಂಟ್ಸ್ ಭೂಮಿಯನ್ನು ಪೊಲೀಸ್ ಇಲಾಖೆಗೆ ವಿಧ್ಯುಕ್ತವಾಗಿ ಹಸ್ತಾಂತರಿಸಿದ್ದಾರೆ. ತನ್ಮೂಲಕ ನೂತನ ಕಟ್ಟಡ ಕಟ್ಟಲು ಎದುರಾಗಿದ್ದ ದೊಡ್ಡ ತೊಡಕು ನಿವಾರಣೆಯಾದಂತಾಗಿದೆ. ಮುಂದಿನ ಕೆಲ ದಿನಗಳಲ್ಲೇ ಕಾಮಗಾರಿ ಚಾಲನೆ ಪಡೆದು, ಈ ವರ್ಷಾಂತ್ಯಕ್ಕೆ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement