ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮರ್ದಾಳದಲ್ಲಿ ಆನೆ ಸಂಚಾರ: ಜನತೆಗೆ ಭೀತಿ

Lingaraj Badiger
Updated On : 7 Jan 2014, 1:05 am

ಉಪ್ಪಿನಂಗಡಿ: ಕಡಬ ಸಮೀಪದ ಮರ್ದಾಳ ಪರಿಸರದಲ್ಲಿ ಭಾನುವಾರ ರಾತ್ರಿ ಆನೆ ಸಂಚಾರ ಮಾಡಿದ್ದು, ಪರಿಸರದ ನಿವಾಸಿಗರನ್ನು ಭೀತಿಯಲ್ಲಿ ದಿನ ಕಳೆಯುವಂತೆ ಮಾಡಿದೆ. ಬಳ್ಪ ಪರಿಸರದ ಕಾಡಿನಿಂದ ಆಗಮಿಸಿದ ಒಂಟಿ ಸಲಗ 102ನೇ ನೆಕ್ಕಿಲಾಡಿ, ಕರ್ಮಾಯಿಗೆ ಆಗಮಿಸಿ ಅಲ್ಲಿ ವಿಜಯಕುಮಾರ್ ರೈ ಅವರ ಜಾಗದ ಆವರಣ ಬೇಲಿಗೆ ಹಾನಿಗೈದು ಮರ್ದಾಳಕ್ಕೆ ಬಂದು ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ದಾಟಿ ಬಂಟ್ರ ಗ್ರಾಮದ ಅರಣ್ಯ ಪ್ರದೇಶಕ್ಕೆ ನುಗ್ಗಿದೆ. ಒಂಟಿ ಸಲಗ ಸಾಗಿದ ದಾರಿಯುದ್ದಕ್ಕೂ ಎದುರಾದ ಬಾಳೆ, ತೆಂಗು ಗಿಡಗಳನ್ನು ನಾಶ ಮಾಡುತ್ತ ಮುಂದೆ ಸಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜನತೆಗೆ ಧೈರ್ಯ ತುಂಬಿದ್ದಾರೆ. ಈ ಹಿಂದೆಯೂ ಆನೆಯ ದಾಳಿ ಈ ಭಾಗದ ಜನತೆಯನ್ನು ಕಾಡಿದ್ದು, ಅದು ಮತ್ತೆ ಮರುಕಳಿಸುವ ಭೀತಿ ಮೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement