ಮಾತ್ರೆ ಸೇವಿಸಿ ಯುವತಿ ಸಾವು
ಬಂಟ್ವಾಳ: ತಾಲೂಕಿನ ಅರಳ ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ಅಧಿಕ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ.ಸ್ಥಳೀಯ ನಿವಾಸಿ ದಿ.ನೋಣಯ ಪೂಜಾರಿ ಪುತ್ರಿ ಅನುಷಾ (20) ಮೃತರು.ಈಕೆ ಕಳೆದ ಕೆಲವು ಸಮಯದಿಂದ ಬಂಟ್ವಾಳದ ಬಡ್ಡಕಟ್ಟೆ ಔಷಧಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಕೆಲವು ವರ್ಷಗಳಿಂದ ವಿಟ್ಲದ ತನ್ನ ದೂರದ ಸಂಬಂಧಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆತ ಇತ್ತೀಚೆಗೆ ದಿಢೀರನೆ ಉದ್ಯೋಗದ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಿದ ಪರಿಣಾಮ ಈಕೆ ಶನಿವಾರ ಮಧ್ಯಾಹ್ನ ಕೆಲಸದ ನಡುವೆ ಹೆಚ್ಚುವರಿ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿರುವುದಾಗಿ ನಗರ ಪೊಲೀಸರು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಈಕೆಯ ತಂದೆ ನೋಣಯ ಪೂಜಾರಿ ಮತ್ತು ತಾಯಿ ವಾರಿಜಾ ನಿಧನರಾಗಿರುವ ಹಿನ್ನೆಲೆಯಲ್ಲಿ ಅಕ್ಕನ ಮನೆಯಲ್ಲಿ ಆಕೆ ವಾಸವಾಗಿದ್ದರು ಎನ್ನಲಾಗಿದೆ.