ಮಕ್ಕಳಲ್ಲಿ ಮಾನವೀಯ ಮೌಲ್ಯ, ನೈತಿಕ ಶಿಕ್ಷಣದ ಬೀಜ ಬಿತ್ತಿ: ಅನುರಾಧ ಕುರುಂಜಿ
ಸುಬ್ರಹ್ಮಣ್ಯ: ಪ್ರತಿಭೆ ಎಲ್ಲರಲ್ಲೂ ಇದೆ.ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ಬೇಕು. ಅಂತಹ ವೇದಿಕೆಯನ್ನು ಯುವಜನ ಮೇಳಗಳ ಮೂಲಕ ಕಲ್ಪಿಸಲಾಗುತ್ತಿದೆ. ಆದರೇ ಅದನ್ನು ಇಂದಿನ ಯುವ ಜನತೆ ಸದುಪಯೋಗ ಪಡಿಸದಿರುವುದು ಖೇದಕರ ಎಂದು ಉಪನ್ಯಾಸಕಿ ಅನುರಾಧ ಕುರುಂಜಿ ಅಭಿಪ್ರಾಯಪಟ್ಟರು.
ಐನಕಿದುವಿನಲ್ಲಿ ಭಾನುವಾರ ನಡೆದ ಸುಳ್ಯ ತಾಲೂಕು ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಥಿಯಾಗಿ ಅವರು ಮತನಾಡಿದರು.
ಗ್ರಾಪಂ ಅಧ್ಯಕ್ಷೆ ಕುಸುಮ ವಹಿಸಿದ್ದರು. ತಾಪಂ ಸದಸ್ಯೆ ತಾರಾ ಮಲ್ಲಾರ, ಸುಬ್ರಹ್ಮಣ್ಯ- ಐನಕಿದು ಬ್ಯಾಂಕಿನ ಅಧ್ಯಕ್ಷ ವಸಂತಕುಮಾರ ಕೆದಿಲ, ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ವಿಶ್ವನಾಥ ಬಿಳಿಮಲೆ, ಸಹಕಾರಿ ಧುರೀಣ ಸೋಮಸುಂದರ ಕೂಜುಗೋಡು, ಐನಕಿದು ಶಾಲೆಯ ಮುಖ್ಯ ಶಿಕ್ಷಕ ಸೀತರಾಮ ಕೆ.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಳಿಕ ಯುವಜನ ಮೇಳದಲ್ಲಿ ಸ್ಪರ್ಧಿಸಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಯುವ ಪ್ರಶಸ್ತಿ ವಿಜೇತ ಲಕ್ಷ್ಮಿನಾರಾಯಣ ಕಜೆಗದ್ದೆ, ಕ್ರೀಡಾಧಿಕಾರಿ ದೇವರಾಜ್ ಮತ್ಲಾಜೆ, ಎಸ್.ಡಿ.ಎಂ.ಸಿ ಅಧ್ಯಕ್ಷ ನೇಮಿರಾಜ ನೆತ್ತಾರ, ನವೋದಯ ಒಕ್ಕೂಟದ ಅಧ್ಯಕ್ಷೆ ಉಷಾಸೋಮಸುಂದರ ಕೋಟೆ, ಪಂಚಾಯ್ತಿ ಸದಸ್ಯ ಭವಾನಿಶಂಕರ ಪೈಲಾಜೆ, ರಾಮಕೃಷ್ಣ ನೆತ್ತಾರ, ನೇತಾವತಿ ಕೂಜುಗೋಡು, ಜೆ.ಜಯಪ್ರಕಾಸ್ ಕೂಜುಗೋಡು.ಪ್ರೀತಮ್ ವೇದಿಕೆಯಲ್ಲಿದ್ದರು.
ಗುಣವರ್ಧನ ಕೆದಿಲ ವಂದಿಸಿದರು. ನವಿನ್ ಕಟ್ರೆಮನೆ ನಿರೂಪಿಸಿದರು.
--
ಬಿಜೆಪಿ ಮೇಲೆ ವಿಶ್ವಾಸಕಳೆದುಕೊಂಡ ಅಡಕೆ ಬೆಳೆಗಾರರು: ವೆಂಕಪ್ಪ ಗೌಡ
ಸುಳ್ಯ: ಅಡಕೆ ಕೊಳೆ ರೋಗ ಸಂತ್ರಸ್ತರಾಗಿ ಪರಿಹಾರ ಪಡೆದ ಯಾವ ರೈತರೂ ಕೂಡ ಬಿಜೆಪಿ ನಡೆಸುವ ರಾಜಕೀಯ ಡೊಂಬರಾಟದಲ್ಲಿ ಭಾಗವಹಿಸಲಾರರು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರೈತರನ್ನು ದಾರಿ ತಪ್ಪಿಸುವ ಹುನ್ನಾರ ಮಾಡುತ್ತಿರುವುದು ಅತ್ಯಂತ ಖೇದಕರ. ಏನೇ ಅಪಪ್ರಚಾರ ಮಾಡಿದರೂ ಅಡಕೆ ಬೆಳೆಗಾರರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮಾತ್ರವಲ್ಲ, ಕೊಳೆರೋಗದ ಅಡಿಯಲ್ಲಿ ಪರಿಹಾರ ಸಿಕ್ಕಿದ ಸಾವಿರಾರು ರೈತರ ಪೈಕಿ ಯಾವೊಬ್ಬ ರೈತನೂ ಬಿಜೆಪಿಯ ರಾಜಕೀಯ ಡೊಂಬರಾಟದ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
'ಮರೀಚಿಕೆ' ಪ್ರಹಸನಕ್ಕೆ ಪ್ರಥಮ ಸ್ಥಾನ
ಬೆಳ್ತಂಗಡಿ: ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ವಲಯ ಅಂತರ್ ವಿವಿ ಯುವಜನ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡ ತಂಡ ಪ್ರದರ್ಶಿಸಿದ 'ಮರೀಚಿಕೆ' ಎಂಬ ಪ್ರಹಸನ ಪ್ರಥಮ ಸ್ಥಾನ ಗಳಿಸಿದೆ. ನೀರುಪೋಲು ಮಾಡುವುದರಿಂದ ಉಂಟಾಗಬಹುದಾದ ದುಷ್ಪರಿಣಾಮದ ಕುರಿತಾದ ಪ್ರಹಸನವನ್ನು ಗೀತಾ ಸುಳ್ಯ ರಚಿಸಿ, ನಿರ್ದೇಶಿಸಿದ್ದಾರೆ. ಭಗೀರಥ ಕುಮಟಾ ಸಂಗೀತ ನಿರ್ದೇಶಿಸಿದ್ದಾರೆ.