ಬೈಕ್ ಡಿಕಿ; ಗಾಯ
ಉಡುಪಿ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಮಂಗಳವಾರ ಇಲ್ಲಿನ ಕಿತಾಬ್ ಘರ್ ಅಂಗಡಿ ಎದುರು ನಡೆದಿದೆ.
ಗಾಯಗೊಂಡವರನ್ನು ಜಗನ್ನಾಥ್ ಕೆ. ಎಂದು ಗುರುತಿಸಲಾಗಿದೆ. ಬೈಕ್ ಚಾಲಕ ಬೈಕನ್ನು ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ಜಗನ್ನಾಥ ಅವರಿಗೆ ಡಿಕ್ಕಿ ಹೊಡೆದು, ಬೈಕನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಜಗನ್ನಾಥ್ ಕೆ. ನೀಡಿದ ದೂರಿನಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರರಿಗೆ ಗಾಯ
ಉಡುಪಿ: ಬೈಕ್ ಮತ್ತು ಕಾರು ಡಿಕ್ಕಿ ಹೊಡೆದು ಬೈಕ್ ಸವಾರ, ಸಹಸವಾರ ಗಾಯಗೊಂಡ ಘಟನೆ ಇಲ್ಲಿನ ಸಂತೆಕಟ್ಟೆಯಲ್ಲಿ ಬುಧವಾರ ನಡೆದಿದೆ. ಗಾಯಗೊಂಡವರನ್ನು ಆನಂದ ಹಾಗೂ ಸಂಜೀವ ಅಮೀನ್ ಎಂದು ಗುರುತಿಸಲಾಗಿದೆ.
ಇವರು ಆರ್ಶೀವಾದ ಪೆಟ್ರೋಲ್ ಬಂಕ್‌ಗೆ ಪೆಟ್ರೋಲ್ ಹಾಕಿಸಲು ಬರುತ್ತಿರುವಾಗ ಸಂತೆಕಟ್ಟೆ ಬಳಿ ಬೈಕನ್ನು ಮುಖ್ಯ ರಸ್ತೆಗೆ ತಿರುಗಿಸಲು ನಿಲ್ಲಿಸಿಕೊಂಡಿರುವ ಸಮಯದಲ್ಲಿ ಕಾರು ಚಾಲಕ ಜಗನ್ನಾಥ ಶೆಟ್ಟಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಆನಂದ ಹಾಗೂ ಸಂಜೀವ ಇವರಿಬ್ಬರು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಈ ಬಗ್ಗೆ ಆನಂದ ಎಂಬವರು ನೀಡಿದ ದೂರಿನಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.