ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದೇಶಿಯರಿಂದ ಮಟ್ಟು ಗುಳ್ಳ ವೀಕ್ಷಣೆ

Mainashree
Updated On : 9 Jan 2014, 10:10 am

ಕಟಪಾಡಿ:  ಅಮೆರಿಕದ ಯುನಿವರ್ಸಿಟಿ ಆಫ್ ಪೆನ್ಸಿಲ್ವೆನಿಯಾದ ವಿದ್ಯಾರ್ಥಿಗಳ ತಂಡ ಮಂಗಳವಾರ ಇಲ್ಲಿನ ಮಟ್ಟು ಗ್ರಾಮದಲ್ಲಿ ಬೆಳೆಸಲಾಗುವ 'ಮಟ್ಟುಗುಳ್ಳ' (ಬದನೆ) ತೋಟಗಳಿಗೆ ಅಧ್ಯಯನ ಭೇಟಿ ನೀಡಿದರು.   
ಸುಮಾರು 29 ಮಂದಿ ಈ ವಿದ್ಯಾರ್ಥಿಗಳು ಭಾರತದಲ್ಲಿನ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಆಗಮಿಸಿದ್ದು, ನವೋದಯ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸೌಲಭ್ಯಗಳನ್ನು ಪಡೆದು ಕೃಷಿ ಚಟುವಟಿಕೆ ನಡೆಸುತ್ತಿರುವುದನ್ನು ಅಧ್ಯಯನ ನಡೆಸಲು ಮಟ್ಟು ಗ್ರಾಮಕ್ಕೆ ಭೇಟಿ ನೀಡಿದ್ದರು.
ಅಲ್ಲವೆ ಕರಾವಳಿಯಲ್ಲಿನ ಒಣ ಮೀನು ತಯಾರಿ, ವಿಲೇವಾರಿ ಮತ್ತು ಮಟ್ಟು ಗುಳ್ಳ ಬೆಳೆಯ ವಿಧಾನಗಳ, ಇದರಲ್ಲಿ ಸ್ವಸಹಾಯ ಸಂಘಗಳ ಪಾತ್ರಗಳ ಬಗ್ಗೆಯೂ ಅಧ್ಯಯನ ನಡೆಸಿದರು. ಕಳೆದ 4 ದಿನಗಳಿಂದ ಈ ವಿದ್ಯಾರ್ಥಿಗಳು ಕರಾವಳಿ ತೀರದಲ್ಲಿ ತಮ್ಮ ಅಧ್ಯಯನ ಕೈಗೊಂಡಿದ್ದು, ಇಲ್ಲಿನ ಸ್ವಸಹಾಯ ಸಂಘಗಳ ಕಾರ್ಯಗಳ ಬಗ್ಗೆ ನಿಟ್ಟೆ ವಿ.ವಿ.ಯ ಪ್ರಾಧ್ಯಾಪಕರು ಮಾರ್ಗದರ್ಶಕರಾಗಿದ್ದಾರೆ.
ಸ್ವಸಹಾಯ ಗುಂಪುಗಳು ಅದ್ಭುತ: ಅಮೆರಿಕದಲ್ಲಿ ಸ್ವಸಹಾಯ ಗುಂಪುಗಳಾಗಲೀ, ಜನಕಲ್ಯಾಣಕ್ಕಾಗಿ ಅಂತರಿಕವಾಗಿ ಸಾಲ ನೀಡುವ ಯಾವುದೇ ವ್ಯವಸ್ಥೆ ಇಲ್ಲ. ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ನವೋದಯ ಸ್ವಸಹಾಯ ಗುಂಪುಗಳ ಆರ್ಥಿಕ ವ್ಯವಸ್ಥೆಯು ಎಲ್ಲರಿಗೂ ಮಾದರಿಯಾದುದು ಎಂದು ಅಮೆರಿಕನ್ ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವೋದಯ ಸಂಘಗಳ ನೋಡೆಲ್ ಅಧಿಕಾರಿ ಪದ್ಮನಾಭ, ಮೇಲ್ವಿಚಾರಕ ಚಂದ್ರಶೇಖರ್, ಪ್ರೇರಕಿ ವಿಮಲಾ ದಯಾನಂದ, ಕಟಪಾಡಿ ವ್ಯವಸಾಯ ಸಹಕಾರಿ ಬ್ಯಾಂಕಿನ ಅಧಿಕಾರಿ ರವಿಕುಮಾರ್ ಮತ್ತಿತರರು ಈ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement