ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

15ರಿಂದ ಆಟೋ ಕನಿಷ್ಠ ಪ್ರಯಾಣದರ 25 ರುಪಾಯಿ

Mainashree
Updated On : 11 Jan 2014, 10:45 am

ಮಂಗಳೂರು: ಇನ್ನು ದ.ಕ.ಜಿಲ್ಲೆಯಲ್ಲಿ ಅಟೋರಿಕ್ಷಾ ಪ್ರಯಾಣ ದರ ದುಬಾರಿಯಾಗಲಿದೆ. ಜ.15ರಿಂದ ಜಾರಿಗೆ ಬರುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪ್ರಯಾಣ ದರವನ್ನು ಪರಿಷ್ಕರಿಸಿದ್ದು, ಕನಿಷ್ಠ ರು. 25 ನಿಗದಿಪಡಿಸಿದೆ. ಈ ಕುರಿತು ಈಚೆಗೆ ಸಾರಿಗೆ ಪ್ರಾಧಿಕಾರ ಸಭೆ ನಡೆಸಿ ರಿಕ್ಷಾ ಚಾಲಕ, ಮಾಲಕರ, ಸಾರ್ವಜನಿಕರ ಅಹವಾಲು ಸ್ವೀಕರಿಸಿತ್ತು. ಮೊದಲ 1.5 ಕಿ.ಮೀ.ಗೆ ರು. 25(ಗರಿಷ್ಟ ಮೂರು ಪ್ರಯಾಣಿಕರಿಗೆ), ನಂತರ ಪ್ರತಿ ಕಿ.ಮೀ.ಗೆ ದರ ರು. 14ರಂತೆ, ಕಾಯುವ ದರ ಮೊದಲ 15 ನಿಮಿಷಕ್ಕೆ ಉಚಿತ, ನಂತರದ 45 ನಿಮಿಷಕ್ಕೆ ಪ್ರಯಾಣ ದರದ ಶೇ.25, ಲಗೇಜು ದರ ಮೊದಲ 20 ಕಿ.ಗ್ರಾಂ. ಉಚಿತ, ನಂತರ ಪ್ರತಿ 20 ಕಿ.ಗ್ರಾಂ. ಅಥವಾ ಭಾಗಕ್ಕೆ ರು. 2. ರಾತ್ರಿ ವೇಳೆ 10 ಗಂಟೆ ಬಳಿಕ ಬೆಳಗ್ಗೆ 5ರ ವರೆಗೆ ಮಾತ್ರ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿತ ದರ ಪಟ್ಟಿಯನ್ನು ಪ್ರತಿ ಅಟೋಗಳಲ್ಲಿ ಪ್ರದರ್ಶಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಲು ಪರವಾನಗಿ ಹೊಂದಿರುವ ಅಟೋಗಳು ಗಡಿ ಪ್ರದೇಶದಿಂದ ಪ್ರಯಾಣಿಕರು ಪ್ರಯಾಣಿಸುವ ಸ್ಥಳದ ವರೆಗೆ ಮೇಲಿನ ದರದ ಒಂದೂವರೆ ಪಟ್ಟು ದರ ಪಡೆಯಬಹುದು.
ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಅಟೋರಿಕ್ಷಾ ಕ್ಯಾಬ್‌ಗಳಿಗೆ ಕಡ್ಡಾಯವಾಗಿ ಫೇರ್ ಮೀಟರ್ ಅಥವಾ ಡಿಜಿಟಲ್ ಫೇರ್ ಮೀಟರ್‌ನ್ನು ಅಳವಡಿಸಿಕೊಂಡು ಮೇಲಿನ ದರಕ್ಕೆ ತಕ್ಕಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಪರಿಷ್ಕೃತ ದರ ಜಾರಿಗೆ ಬಂದ ದಿನಾಂಕದಿಂದ 30 ದಿನದೊಳಗೆ ತಮ್ಮ ಫ್ಲಾಗ್ ಮೀಟರ್‌ನಲ್ಲಿ ಮರು ಅಳವಡಿಸಬೇಕು. ತಪ್ಪಿದಲ್ಲಿ ಕಾನೂನಿನ ಪ್ರಕಾರ ದಂಡ ವಿಧಿಸುವುದು ಅಥವಾ ಪರವಾನಗಿ ರದ್ದತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement