ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನೆಗೆ ಕನ್ನ; ನಗ ನಗದು ಕಳವು

Mainashree
Updated On : 11 Jan 2014, 10:40 am

ಕಾಪು; ಇಲ್ಲಿನ ಉಳಿಯಾರಗೋಳಿ ಗ್ರಾಮದ ಎ.ಸಿ. ನಿವಾಸ ಎಂಬ ಮನೆಯಿಂದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ನಗ- ನಗದನ್ನು ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಅಂಗರ ಸಿ. ಮೆಂಡನ್  ಎಂಬವರ ಈ ಮನೆಯಲ್ಲಿ ಅವರ ಅಕ್ಕ ಜಲಜ ಮೆಂಡನ್ ಎಂಬವರು ಒಬ್ಬರೇ ವಾಸವಾಗಿದ್ದು. ಅವರು ಎಂದಿನಂತೆ ರಾತ್ರಿ 8 ಗಂಟೆಗೆ ನೆರೆಮನೆಯವರ ಮನೆಗೆ ಮಲಗಲು ಹೋಗಿದ್ದು, ಶುಕ್ರವಾರ ಬೆಲಗ್ಗೆ 5 ಗಂಟೆಗೆ ವಾಪಸ್ ಮನೆಗೆ ಬಂದಾಗ ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ಮಾಡಿನ ಹೆಂಚು ತೆಗೆದು ಒಳಗಿಳಿದ ಕಳ್ಳರು, ಮನೆಯಲ್ಲಿದ್ದ 30 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಚೈನು ಹಾಗೂ 35,000 ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಅಂಗರ ಸಿ. ಮೆಂಡನ್ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement