ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರವಿಶಂಕರ್ ಒಡ್ಡಂಬೆಟ್ಟು, ಅನಿತಾ ನರೇಶ್‌ಗೆ 'ಕನ್ನಡರತ್ನ' ಪ್ರಶಸ್ತಿ

Mainashree
Updated On : 11 Jan 2014, 10:44 am

ಮಂಗಳೂರು: ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ 2013ನೇ ಸಾಲಿನ ಕದ್ರಿ ಲಯನ್ಸ್ ಕನ್ನಡ ರತ್ನ ಪ್ರಶಸ್ತಿ(ಕಲಕ)ಯನ್ನು ಕವಿ, ಉಪನ್ಯಾಸಕ ರವಿಶಂಕರ ಒಡ್ಡಂಬೆಟ್ಟು ಹಾಗೂ 2014ನೇ ಸಾಲಿಗೆ ಲೇಖಕಿ ಅನಿತಾ ನರೇಶ್ ಮಂಚಿ ಇವರಿಗೆ ಪ್ರಕಟಿಸಲಾಗಿದೆ.   ಜ.14ರಂದು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಸಂಕ್ರಾಂತಿ ಉತ್ಸವದಲ್ಲಿ ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸೀತಾರಾಮ ಪ್ರಭು (ಸಾಹಿತ್ಯ), ಚಂದ್ರಹಾಸ ದೇವಾಡಿಗ(ಸೇವೆ), ವಿಲ್ಸನ್ ಜೆಡಿಸೋಜ(ಚಿತ್ರಕಲೆ), ಶಂಕರನಾರಾಯಣ ಮಾಯಿಪ್ಪಾಡಿ (ಯಕ್ಷಗಾನ)ವಿನ್ನಿ ಫೆರ್ನಾಂಡಿಸ್(ಸಮಾಜಸೇವೆ-ಚಲನಚಿತ್ರ)ರನ್ನು ಸನ್ಮಾನಿಸಲಾಗುತ್ತದೆ. ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡಕ ಪ್ರಶಸ್ತಿ ಪ್ರದಾನ ಮಾಡಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು ಅತಿಥಿಯಾಗಿ ಭಾಗವಹಿಸುವರು. ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಸಿ.ಪ್ರಭು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ಪೈ ಅಧ್ಯಕ್ಷತೆ ವಹಿಸುವರು. ಮಂಜುನಾಥ ಮೂರ್ತಿ, ಕವಿತಾ ಶಾಸ್ತ್ರಿ ಶುಭಾಶಂಸನೆ ಮಾಡುವರು. ಕಲಕ ಸಂಚಾಲಕ ಎನ್.ಟಿ.ರಾಜ, ಕನ್ನಡ ಅಭ್ಯುದಯ ವಿಭಾಗ ಸಂಯೋಜಕ ವಿಟ್ಲ ಮಂಗೇಶ್ ಭಟ್ ಹಾಜರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement