ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

14 ರಂದು 'ಶರವು ಕ್ಷೇತ್ರದಿಂದ ಗೋಮಾತಾ ರಥಯಾತ್ರೆ'

Rashmi Kasaragodu
Updated On : 12 Jan 2014, 2:21 am

ಮಂಗಳೂರು: ಗೋವಾನಿತಾಶ್ರಮ ಟ್ರಸ್ಟ್ ವತಿಯಿಂದ ಜ. 14 ರಂದು ಶ್ರೀ ಶರವು ಕ್ಷೇತ್ರದಿಂದ ಉರ್ವ ಮಾರಿಗುಡಿಯವರೆಗೆ ಗೋವಂಶ ಉಳಿಸಿ ಜಾಗೃತಿ ಮೂಡಿಸುವ ಸಲುವಾಗಿ 'ಗೋಮಾತಾ ರಥಯಾತ್ರೆ' ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 8.30ಕ್ಕೆ ಗೋಮಾತೆಗೆ ಆರತಿ ಬೆಳಗಿ ರಥಯಾತ್ರೆ ಪ್ರಾರಂಭಗೊಳ್ಳಲಿದೆ. ರಥಬೀದಿ, ನ್ಯೂಚಿತ್ರಾ, ಅಳಕೆ, ಕುದ್ರೋಳಿ, ಮಣ್ಣಗುಡ್ಡೆಯಾಗಿ ಉರ್ವ ಮಾರಿಗುಡಿಯಲ್ಲಿ ಸಮಾಪನಗೊಳ್ಳಲಿದೆ. ಈ ಸಂದರ್ಭದಲ್ಲಿ ಪಾವೂರಿನ ಪಜೀರು ಬಳಿಯಿರುವ ಗೋವನಿತಾಶ್ರಮದಲ್ಲಿರುವ 300 ಹಸು ಕರುಗಳ ನಿರ್ವಹಣೆಗಾಗಿ ದಾನಿಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ.ಪಿ. ಅನಂತಕೃಷ್ಣ ಭಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗೋಷ್ಠಿಯಲ್ಲಿ ಗೋಪ್ರೇಮಿ ವೇದಿಕೆಯ ದಿನೇಶ್ ಪೈ, ಶ್ರೀಧರ್ ಭಟ್, ಜೆ.ಕೆ. ಮೋಹನ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement