14ರಂದು ಪಣಂಬೂರಿನಲ್ಲಿ ಸಂಕ್ರಾಂತಿ ಉತ್ಸವ
ಮಂಗಳೂರು: ಪಣಂಬೂರು ಶ್ರೀನಂದನೇಶ್ವರ ದೇವಸ್ಥಾನದಲ್ಲಿ ನವಮಂಗಳೂರು ಬಂದರು ಯಕ್ಷಗಾನ ಕಲಾ ಮಂಡಳಿ, ರೋಟರಿ ಕ್ಲಬ್ ಆಶ್ರಯದಲ್ಲಿ ಪಣಂಬೂರು ಸಂಕ್ರಾಂತಿ ಉತ್ಸವ ಜ.14ರಂದು ನಡೆಯಲಿದೆ ಎಂದು ಸಂಚಾಲಕ ಶಂಕರನಾರಾಯಣ ಮೈರ್ಪಾಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 8.30ಕ್ಕೆ ಉತ್ಸವವನ್ನು ಹೊಸಬೆಟ್ಟು ನವ ವೃಂದಾವನ್ ಸೇವಾ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷ ಹರಿದಾಸ ವಾದೀಶ ಆಚಾರ್ಯ ಉದ್ಘಾಟಿಸುವರು. ನ್ಯಾಯವಾದಿ ರಂಜನ್ ರಾವ್ ಅಧ್ಯಕ್ಷತೆ ವಹಿಸುವರು. ಶಾಸಕ ಮೊಯ್ದಿನ್ ಬಾವ್ ಅತಿಥಿಯಾಗಿ ಆಗಮಿಸುವರು. ಬಳಿಕ ಮಕ್ಕಳಿಗೆ ಚಿತ್ರಕಲೆ, ಗಾಳಿಪಟ ಸ್ಪರ್ಧೆ, ಸೇತುಬಂಧನ, ಸೀತಾ ಸ್ವಯಂವರ, ಮೌಲ್ಯಗಳ ಕಣಜ ಪುರಾಣ, ಯಕ್ಷಗಾನ ಸಾಂಸ್ಕೃತಿಕ ರಾಯಭಾರಿ, ಬಗ್ಗೆ ಭಾಷಣ ಸ್ಪರ್ಧೆ, ಪುರಾಣ, ಮಹಾಭಾರತ, ರಾಮಾಯಣ, ಭಾಗವತ ಯಕ್ಷರಂಗವನ್ನೊಳಗೊಡ ರಸಪ್ರಶ್ನೆ, ಪೌರಾಣಿಕ ವೇಷ ಸ್ಪರ್ಧೆ ಏರ್ಪಡಲಿದೆ. ಸಂಜೆ 6.30ಕ್ಕೆ ಸಮಾರೋಪದಲ್ಲಿ ಲಕ್ಷ್ಮೀನಾರಾಯ ಆಸ್ರಣ್ಣ ಆಶೀರ್ವಚನ ನೀಡುವರು. ಕರಾವಳಿ ಸಮೂಹ ಕಾಲೇಜು ಅಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸುವರು. ಸಚಿವ ವಿನಯ ಕುಮಾರ್ ಸೊರಕೆ, ಸಚಿವ ಅಭಯಚಂದ್ರ ಜೈನ್ ಭಾಗವಹಿಸುವರು ಎಂದರು.