ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊಕ್ಕಡ ಎಂಡೋ ಪಾಲನ ಕೇಂದ್ರಕ್ಕೆ ಹೈಕೋರ್ಟ್ ಆಯೋಗ ಭೇಟಿ

Rashmi Kasaragodu
Updated On : 12 Jan 2014, 2:23 am

ಉಪ್ಪಿನಂಗಡಿ: ರಾಜ್ಯ ಹೈಕೋರ್ಟ್‌ನಲ್ಲಿ ಎಂಡೋ ಪೀಡಿತರ ವಿಚಾರದಲ್ಲಿ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನೇಮಿಸಿದ ವೈಶಾಲಿ ಹೆಗ್ಡೆ ನೇತೃತ್ವದ ಕಮಿಷನ್ ಶನಿವಾರ ಕೊಕ್ಕಡದ ಎಂಡೋಪಾಲನ ಕೇಂದ್ರಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿತು.
 ಸರ್ಕಾರದ ತಪ್ಪಿನಿಂದಾಗಿ ಬದುಕು ನರಕ ಸದೃಶ್ಯಗೊಂಡು ಬಾಳುತ್ತಿರುವ ನತದೃಷ್ಟರ ಬಗ್ಗೆ ಸರ್ಕಾರವೇ ಪೂರ್ಣ ಹೊಣೆಗಾರಿಕೆ ವಹಿಸಬೇಕು. ಎಲ್ಲ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕು. ತಾಲೂಕಿಗೊಂದು ಪುನರ್ವಸತಿ ಕೇಂದ್ರ ತೆರೆಯಬೇಕು ಹಾಗೂ ಗರಿಷ್ಠ ಸಂಖ್ಯೆಯ ಸಂತ್ರಸ್ತರನ್ನು ಹೊಂದಿರುವ ಕೊಕ್ಕಡದ ಪರಿಸರದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಬೇಕು. ಈ ಕೇಂದ್ರಗಳ ಹೊಣೆಗಾರಿಕೆಯನ್ನು ಸರ್ಕಾರವೇ ಪೂರ್ಣವಾಗಿ ವಹಿಸಿಕೊಂಡು ನಿರ್ವಹಿಸಬೇಕು ಮೊದಲಾದ ಬೇಡಿಕೆಗಳನ್ನು ಆಯೋಗದ ಮುಂದೆ ಪ್ರಸ್ತಾಪಿಸಲಾಯಿತು.
 ಈ ಸಂದರ್ಭದಲ್ಲಿ ಮಾನವ ಹಕ್ಕು ಪ್ರತಿಷ್ಠಾನದ ಸಂಚಾಲಕ ರವೀಂದ್ರನಾಥ ಶ್ಯಾನ್‌ಭಾಗ್, ಎಂಡೋ ಸಂತ್ರಸ್ತರ ಹೋರಾಟದ ಮುಂದಾಳು ಶ್ರೀಧರ ಗೌಡ ಕೆಂಗುಡೇಲು, ಸ್ಥಳೀಯ ಗಣ್ಯರಾದ ಕೃಷ್ಣ ಭಟ್, ನಾರಾಯಣ ಗೌಡ, ಪೂವಾಜೆ ಕುಶಾಲಪ್ಪ ಗೌಡ ಎಂಡೋ ಪೀಡಿತರ ಬವಣೆಗಳನ್ನು ಅವರ ಕುಟುಂಬ ಪಡುತ್ತಿರುವ ಸಂಕಷ್ಟಗಳನ್ನು ವಿವರಿಸಿದರು. ಪಾಲನಾ ಕೇಂದ್ರದ ವೈದ್ಯರು, ವ್ಯವಸ್ಥಾಪಕರು ಆಯೋಗಕ್ಕೆ ಅಗತ್ಯ ಮಾಹಿತಿಗಳನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement