ಪುತ್ತೂರು ಎಪಿಎಂಸಿಗೆ ರು. 88 ಲಕ್ಷ ಉಳಿಕೆ ಬಜೆಟ್
ಪುತ್ತೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 2014-15ನೇ ಸಾಲಿಗೆ ರು. 88.42 ಲಕ್ಷ ಉಳಿಕೆ ಬಜೆಟ್ ಮಂಡಿಸಿದೆ. ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬರವರ ಅಧ್ಯಕ್ಷತೆಯಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಲಾಗಿದೆ. ಬಜೆಟ್ನಲ್ಲಿ ರು. 2.75 ಕೋಟಿ ಆದಾಯದ ಮೂಲಗಳನ್ನು ಉಲ್ಲೇಖಿಸಲಾಗಿದೆ. ಮುಂದಿನ ಸಾಲಿನಲ್ಲಿ ರು. 1.87 ಕೋಟಿ ಖರ್ಚು ನಿರೀಕ್ಷಿಸಲಾಗಿದೆ ಎಂದು ಬಜೆಟ್ ಮಂಡನೆಯ ಬಳಿಕ ಅಧ್ಯಕ್ಷ ಕೃಷ್ಣಶೆಟ್ಟಿ ಹೇಳಿದರು. ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಎಲಿಯ, ನಿರ್ದೇಶಕರಾದ ಪಿ. ಸೀತಾರಾಮ ಗೌಡ, ಕೆ. ಎಸ್. ರಂಗನಾಥ ರೈ, ಶೀನಪ್ಪ ಗೌಡ. ಯು, ಯಶೋಧರ ಕೆ. ಗೌಡ, ಡಿ. ಸೋಮನಾಥ, ಕೆ. ಕೃಷ್ಣನಾಯ್ಕ, ವಿ.ಎಚ್.ವಿ. ಶುಕೂರ್ ಮತ್ತು ಮಹೇಶ್ ರೈ ಭಾಗವಹಿಸಿದ್ದರು. ಕಾರ್ಯದರ್ಶಿ ಆಗಸ್ಟಿನ್ ಡಿಸೋಜಾ ಸ್ವಾಗತಿಸಿದರು. ಸಿಬ್ಬಂದಿ ರಾಮಚಂದ್ರ ಸಹಕರಿಸಿದರು.