ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನೆಗೆ ಕನ್ನ ಹಾಕುತ್ತಿದ್ದ ಐವರು ಡೇರೆ ವಾಸಿಗಳ ಸೆರೆ

Rashmi Kasaragodu
Updated On : 12 Jan 2014, 2:23 am

ಮ ಂಗಳೂರು: ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ವಾಮಂಜೂರಿನ ಐವರು ಡೇರೆ ವಾಸಿಗಳನ್ನು ಬಜ್ಪೆ ಪೊಲೀಸರು ಬಂಧಿಸಿ, ಆರೋಪಿಗಳಿಂದ 3.2 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮುನಿಯಮ್ಮ(32), ಗುಲಾಬಿ(22), ಲಕ್ಷ್ಮೀ(26), ಮಂಜ(30), ಸರಸ್ವತಿ(27) ಬಂಧಿತರು. ಇವರು ಪಡುಪೆರಾರ ಅಂಬಿಕಾ ನಗರದ ಪದ್ಮನಾಭ ಪೂಜಾರಿ ಎಂಬವರ ಮನೆಯಿಂದ ಜ.2ರಂದು ಚಿನ್ನಾಭರಣ ದೋಚಿದ್ದರು. ಹಗಲಲ್ಲಿ ಡೇರೆಗಳಲ್ಲಿ ವಾಸಿಸುತ್ತ ರಾತ್ರಿಗಳಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದರು. ಈಗ ಪೊಲೀಸರು 12 ಸಾವಿರ ನಗದು, 12.8 ಗ್ರಾಂ ಚಿನ್ನಾಭರಣ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಗೆ ಜ.26ರವರಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement