ಲಾರಿ - ಕಾರು ಡಿಕ್ಕಿ; ಮೂರು ಮಂದಿಗೆ ಗಾಯ
ಕಾಪು: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮೂಳೂರು ಎಸ್.ಎಂ. ನರ್ಸರಿ ಬಳಿ ಶುಕ್ರವಾರ ನಡೆದಿದೆ. ಗಾಯಗೊಂಡವರನ್ನು ಚಿತ್ತರಂಜನ್ ಆಳ್ವ, ತಿಲೋತ್ತಮ ಆಳ್ವ, ಋಷೀಕ ಎಂದು ಗುರುತಿಸಲಾಗಿದೆ. ಇವರು ಕಾರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿರುವಾಗ ಮೂಳೂರು ಎಸ್.ಎಂ. ನರ್ಸರಿ ಬಳಿ ಲಾರಿ ಚಾಲಕ ಮೊಹಮ್ಮದ್ ಶರೀಫ್ ವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ಈ ಬಗ್ಗೆ ಸಾಗರ ಹೆಗ್ಡೆ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಬ್ರಹ್ಮಣ್ಯ: ಇಂದು ನೃತ್ಯೋಪಾಸನಾ ಕಾರ್ಯಕ್ರಮ
ಸುಬ್ರಹ್ಮಣ್ಯ: ನೃತ್ಯೋಪಾಸನಾ ಕಲಾಕೇಂದ್ರ ಕಾವ್ಯಶ್ರೀ ಮುಕ್ರಂಪಾಡಿ ಪ್ರಸ್ತುತಪಡಿಸುವ 1ನೇ ವರ್ಷದ ನೃತ್ಯೋಪಾಸನಾ ಕಾರ್ಯಕ್ರಮ ಜ.12ರಂದು ಸಂಜೆ 5.30ಕ್ಕೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮ ಸಮ್ಮೇಳನ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಶ್ರೀಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ವಹಿಸಲಿದ್ದು, ಅಭ್ಯಾಗತರಾಗಿ ಶಾಂತಲ ನಾಟ್ಯ ಪ್ರಶಸ್ತಿ ಪುರಸ್ಕೃತ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಮತ್ತು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳ ಕಾರ್ಯ ನಿರ್ವಹಣಾಧಿಕಾರಿ ಎಂ.ನಾಗರಾಜ ಪಾಲ್ಗೊಳ್ಳಲಿದ್ದಾರೆ.
ಇಂದು ನೇರ ಸಂದರ್ಶನ
ಮಂಗಳೂರು: ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಬಿಎಂ ವತಿಯಿಂದ ಜ. 12 ರಂದು ಪದವಿದಾರರಿಗೆ ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಢಿಢಿಢಿ.್ಛಛಟಿಛ್ಠಛಜಟ್ಜ್ಝಿಟಿಜಜ್ಠ್ಝಟ್ಜಿ.್ಝಟಿ ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.