ಸಿಬಿಐ ತನಿಖೆ ಆದೇಶ ಪ್ರತಿ ಪ್ರದರ್ಶಿಸಿದ ಬಂಗೇರ
ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ನ.6ರಂದು ಆದೇಶ ಹೊರಡಿಸಿದೆ ಎಂದು ಶಾಸಕ ವಸಂತ ಬಂಗೇರ ದಾಖಲೆ ಸಮೇತ ತಿಳಿಸಿದರು. ಜೊತೆಗೆ ಪ್ರಕರಣದ ತನಿಖೆಯ ಫಲಿತಾಂಶ ಹೊರ ಬರುವವರೆಗೆ ಈ ಸಂಬಂಧ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಲ್ಲಿಸುವಂತೆಯೂ ಅವರು ವಿನಂತಿಸಿದರು.
ಶನಿವಾರ ಇಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ನ.6ರಂದು ಆದೇಶ ಹೊರಡಿಸಿದೆ. ಈ ಬಗ್ಗೆ ಯಾರಿಗೂ ಅನುಮಾನದ ಅಗತ್ಯವಿಲ್ಲ ಎಂದು ಆದೇಶದ ಪ್ರತಿಯನ್ನು ಪ್ರದರ್ಶಿಸಿದರು.